ADVERTISEMENT

ಪ್ಲಾಸ್ಟಿಕ್ ಡ್ರಮ್ ಬಳಸಿ ನಿರ್ಮಿಸಿದ ಬೋಟ್‌ನಲ್ಲಿ ಜಲಾವೃತ ರಸ್ತೆ ದಾಟಿದ ನವದಂಪತಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2019, 15:48 IST
Last Updated 14 ಜುಲೈ 2019, 15:48 IST
   

ಅರಾರಿಯಾ: ಮದುವೆ ಮುಗಿಸಿ ಮನೆಯ ದಾರಿ ಹಿಡಿಯಬೇಕಾದರೆ ರಸ್ತೆಗಳೆಲ್ಲವೂ ಜಲಾವೃತವಾಗಿದ್ದವು.ಹೀಗಿರುವಾಗ ನದಿಯಂತಾಗಿರುವ ರಸ್ತೆಯಲ್ಲಿ ಪ್ಲಾಸ್ಟಿಕ್ ಡ್ರಮ್, ಮರದ ಹಲಗೆ ಬಳಸಿ ನಿರ್ಮಿಸಿದ ಬೋಟ್‌ನಲ್ಲಿ ಕುಳಿತು ಮನೆಯತ್ತ ಸಾಗುತ್ತಿರುವ ನವದಂಪತಿಗಳ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಬಿಹಾರದ ಅರಾರಿಯಾ ಜಿಲ್ಲೆಯ ಗಾರ್ಹಾ ಗ್ರಾಮದಲ್ಲಿ ನಡೆದ ವಿವಾಹದ ನಂತರ ನವದಂಪತಿಗಳು ಜೋಗ್‌ಬನಿಗೆ ತೆರಳುವಾಗ ಈ ರೀತಿಯ ಬೋಟ್ ಬಳಸಿದ್ದಾರೆ.

ರಸ್ತೆಗಳೆಲ್ಲವೂ ಜಲಾವೃತವಾಗಿದ್ದರಿಂದ ನವದಂಪತಿಗಳನ್ನು ಅವರ ಮನೆಗೆ ಕಳಿಸಿಕೊಡುವುದಕ್ಕಾಗಿ ನಾವು ಪ್ಲಾಸ್ಟಿಕ್ ಡ್ರಮ್ ಬಳಸಿ ತಾತ್ಕಾಲಿಕ ಬೋಟ್ ನಿರ್ಮಿಸಿದ್ದೇವೆ ಎಂದು ವರನ ಸಂಬಂಧಿಕರು ಹೇಳಿದ್ದಾರೆ.

ADVERTISEMENT

ಎಡೆಬಿಡದೆ ಸುರಿಯತ್ತಿರುವ ಮಳೆಯಿಂದಾಗಿ ಅರಾರಿಯಾ, ದರ್ಭಂಗ ಮತ್ತು ಮಧುಬನಿ ಜಿಲ್ಲೆಯ ಬಹುತೇಕ ಪ್ರದೇಶಗಳು ಜಲಾವೃತವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.