ಚಂದ್ರಯಾನದ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಮತ್ತೊಂದು ಸಾಧನೆ ಮಾಡಿದೆ. ಇಸ್ರೋ ಕಳಿಸಿದ್ದ ಆದಿತ್ಯ ನೌಕೆ ಇದೀಗ ನಿಗದಿತ ಎಲ್-1 ಕಕ್ಷೆ ತಲುಪಿದೆ. ಆದಿತ್ಯ ಎಲ್1 ಮಹತ್ವಾಕಾಂಕ್ಷೆಯ ಪ್ರಯಾಣವನ್ನು ಪ್ರಾರಂಭಿಸಿದ 127 ದಿನಗಳ ನಂತರ ಶನಿವಾರ ತನ್ನ ಅಂತಿಮ ಗಮ್ಯಸ್ಥಾನದ ಕಕ್ಷೆಯನ್ನು ತಲುಪಿದೆ. ಸೋಲಾರ್ ಮಿಷನ್ ಅಡಿಯಲ್ಲಿ ISRO ಆದಿತ್ಯ ಎಂಬ ನೌಕೆಯನ್ನು ಕಳಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ತಮ್ಮ ಎಕ್ಸ್ ಖಾತೆಯಲ್ಲಿ ಇಸ್ರೋ ಸಾಧನೆಯನ್ನು ಶ್ಲಾಘಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.