‘ಗೋವುಗಳ ಸಾಕಾಣಿಕೆ ಹೆಸರಿನಲ್ಲಿ ಅವುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವ ಮೂಲಕ ಭಾರತದಲ್ಲಿ ಅತಿ ದೊಡ್ಡ ವಂಚನೆಯನ್ನು ಇಸ್ಕಾನ್ ನಡೆಸುತ್ತಿದೆ ಎಂದು ಸಂಸದೆ ಮನೇಕಾ ಗಾಂಧಿ ಆರೋಪಿಸಿದ್ದಾರೆ. ‘ಆಂಧ್ರಪ್ರದೇಶದ ಅನಂತಪುರದಲ್ಲಿರುವ ಇಸ್ಕಾನ್ ಗೋ ಶಾಲೆಗೆ ಇತ್ತೀಚೆಗೆ ಭೇಟಿ ನೀಡಿದ್ದೆ. ಅಲ್ಲಿ ಹಾಲು ನೀಡುವ ಹಸುಗಳಾಗಲೀ, ಕರುಗಳಾಗಲಿ ಇರಲಿಲ್ಲ. ಇದ್ದ ಹಸು ಹಾಗೂ ಕರುಗಳನ್ನು ಮಾರಾಟ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಯಿತು ಎಂದು ಮನೇಕಾ ಆರೋಪಿಸಿದ್ದಾರೆ. ಮನೇಕಾ ಅವರ ಈ ಆರೋಪವನ್ನು ಇಸ್ಕಾನ್ ತಳ್ಳಿ ಹಾಕಿದೆ. ಮನೇಕಾ ಗಾಂಧಿ ಅವರ ಈ ಆರೋಪ ಸುಳ್ಳು ಹಾಗೂ ಆಧಾರ ರಹಿತವಾಗಿದೆ. ಕೇಂದ್ರದ ಮಾಜಿ ಸಚಿವರ ಇಂಥ ಹೇಳಿಕೆ ಅಚ್ಚರಿಮೂಡಿಸಿದೆ ಎಂದೂ ಇಸ್ಕಾನ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.