ನವದೆಹಲಿ: ಪರಿಸರಕ್ಕೆ ಹಾನಿಯುಂಟು ಮಾಡಿದ ಕಾರಣಕ್ಕೆ ಬಿಪಿಸಿಎಲ್, ಎಚ್‌ಪಿಸಿಎಲ್ ಸೇರಿದಂತೆ ನಾಲ್ಕು ಕಂಪನಿಗಳಿಗೆ ₹286.2 ಕೋಟಿ ವಿಧಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಆದೇಶಿಸಿದೆ.
ಮುಂಬೈನ ಮಹುಲ್, ಅಂಬಾಪಾಡಾ, ಚೆಂಬೂರು ಪ್ರದೇಶದಲ್ಲಿ ಗಾಳಿಯ ಗುಣಮಟ್ಟ ವಿಪರೀತ ಹಾನಿಗೊಳಗಾಗಿದ್ದು, ’ಗ್ಯಾಸ್ ಚೇಂಬರ್’ನಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಎನ್‌ಜಿಟಿ ಅಸಮಾಧಾನ ವ್ಯಕ್ತಪಡಿಸಿದೆ.
ಸೀ ಲಾರ್ಡ್ ಕಂಟೇನರ್ಸ್ ಲಿಮಿಟೆಡ್, ಏಜಿಸ್ ಲಾಗಿಸ್ಟಿಕ್ ಲಿಮಿಟೆಡ್ ಇತರೆ ಎರಡು ಕಂಪನಿಗಳು. ಪರಿಸರದ ಹಾನಿಯಿಂದ ಮನುಷ್ಯನ ಶ್ವಾಸಕೋಶ ಮತ್ತು ಇತರೆ ಅಂಗಾಂಗಗಳಿಗೆ ಹಾನಿ ಆಗಲಿದೆ. ಇದಕ್ಕೆ ಪರಿಸರ ಮಾಲಿನ್ಯವೇ ಕಾರಣ ಎಂದು ನ್ಯಾಯಮಂಡಳಿಯು ಅಭಿಪ್ರಾಯಪಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.