ADVERTISEMENT

ಫಾಸ್ಟ್ಯಾಗ್‌ ವ್ಯಾಲೆಟ್‌ನಲ್ಲಿ ಕನಿಷ್ಠ ಮೊತ್ತ ನಿಬಂಧನೆ ರದ್ದತಿಗೆ ನಿರ್ಧಾರ

ಪಿಟಿಐ
Published 10 ಫೆಬ್ರುವರಿ 2021, 18:44 IST
Last Updated 10 ಫೆಬ್ರುವರಿ 2021, 18:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಫಾಸ್ಟ್ಯಾಗ್‌ ವ್ಯಾಲೆಟ್‌ನಲ್ಲಿ ಕನಿಷ್ಠ ಮೊತ್ತ ಇರಬೇಕು ಎಂಬ ನಿಬಂಧನೆಯನ್ನು ತೆಗೆದು ಹಾಕಲು ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (ಎನ್‌ಎಚ್‌ಎಐ) ನಿರ್ಧರಿಸಿದೆ.

ಟೋಲ್‌ಪ್ಲಾಜಾಗಳಲ್ಲಿ ನಿರ್ಬಂಧರಹಿತ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಎನ್‌ಎಚ್‌ಎಐ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಭದ್ರತಾ ಠೇವಣಿಯ ಜೊತೆಗೆ ಕನಿಷ್ಠ ಮೊಬಲಗು ವ್ಯಾಲೆಟ್‌ನಲ್ಲಿ ಇರಬೇಕು ಎಂಬುದನ್ನು ಫಾಸ್ಟ್ಯಾಗ್‌ ವಿತರಣೆ ಮಾಡುವ ಬ್ಯಾಂಕುಗಳು ಕಡ್ಡಾಯಗೊಳಿಸಿವೆ. ಈ ನಿಬಂಧನೆಯನ್ನು ತೆಗೆದು ಹಾಕುವುದಾಗಿ ಎನ್‌ಎಚ್‌ಎಐ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.