ADVERTISEMENT

ನಾಯಿ ದಾಳಿಗೆ ವೃದ್ಧ ಸಾವು: ₹7.5 ಲಕ್ಷ ಪರಿಹಾರ ನೀಡಲು ಸೂಚನೆ

ಪಿಟಿಐ
Published 3 ಮೇ 2024, 14:12 IST
Last Updated 3 ಮೇ 2024, 14:12 IST
<div class="paragraphs"><p>ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ</p></div>

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ

   

ನವದೆಹಲಿ: ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (ಎಎಮ್‌ಯು) ಆವರಣದಲ್ಲಿ ಕಳೆದ ವರ್ಷ ಬೀದಿ ನಾಯಿಗಳ ದಾಳಿಯಿಂದ 65 ವರ್ಷದ ವೃದ್ಧ ಮೃತಪಟ್ಟಿರುವುದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಹೇಳಿದೆ.  

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅಯೋಗ, ಮೃತ ವ್ಯಕ್ತಿಯ ಕುಟುಂಬಸ್ಥರಿಗೆ ₹7.5 ಲಕ್ಷ ಪರಿಹಾರ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು ಎಂಟು ವಾರಗಳ ಒಳಗಾಗಿ ಹಣ ಪಾವತಿ ಮಾಡಿರುವ ದಾಖಲೆಗಳನ್ನು ಒದಗಿಸುವಂತೆ ಸೂಚಿಸಿರುವುದಾಗಿ ತಿಳಿಸಿದೆ. 

ADVERTISEMENT

ಕಳೆದ ವರ್ಷದ ಏಪ್ರಿಲ್‌ನಲ್ಲಿ ವಿ.ವಿ ಆವರಣದಲ್ಲಿರುವ ಉದ್ಯಾನದಲ್ಲಿ ಸಫ್ದರ್‌ ಅಲಿ ಖಾನ್‌ (65) ಎಂಬುವವರು ಮುಂಜಾನೆ ವಾಕಿಂಗ್‌ಗೆ ತೆರಳಿದ್ದ ವೇಳೆ ಬೀದಿ ನಾಯಿಗಳು ದಾಳಿ ನಡೆಸಿದ್ದವು. ತೀವ್ರವಾಗಿ ಗಾಯಗೊಂಡಿದ್ದ ಸಫ್ದರ್‌ ಮೃತಪಟ್ಟಿದ್ದರು. ನಾಯಿಗಳು ದಾಳಿ ನಡೆಸಿದ್ದ ದೃಶ್ಯಾವಳಿಯ ವಿಡಿಯೊವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.