ನವದೆಹಲಿ : ಭಾರತೀಯ ಯುವ ಜನರಿಗೆ ಉದ್ಯೋಗದ ಆಮಿಷವೊಡ್ಡಿ ಅವರನ್ನು ವಿದೇಶಗಳಿಗೆ ಕಳ್ಳಸಾಗಾಣಿಕೆ ಮಾಡುವ ಆರೋಪಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಂಧಿಸಿದೆ ಎಂದು ಮಂಗಳವಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಬಂಧಿತರನ್ನು ಮನ್ಜೂರ್ ಆಲಂ ಅಲಿಯಾಸ್ ದೆಹಲಿಯ ಗುಡ್ಡು, ಸಾಹಿಲ್ ಮತ್ತು ಆಶಿಶ್ ಅಲಿಯಾಸ್ ಹರಿಯಾಣದ ಬಹಾದುರ್‌ಗಢದ ಅಖಿಲ್, ಪವನ್ ಯಾದವ್ ಅಲಿಯಾಸ್ ಅಫ್ರೋಜ್ ಅಲಿಯಾಸ್ ಬಿಹಾರದ ಸೀವಾನ್‌ನ ಅಫ್ಜಲ್ ಎಂದು ಗುರುತಿಸಲಾಗಿದೆ.
ವಿದೇಶಕ್ಕೆ ಕರೆದೊಯ್ದ ಯುವಜನರನ್ನು ನಕಲಿ ಕಾಲ್ ಸೆಂಟರ್‌ಗಳು ಮತ್ತಿತರ ಸ್ಥಳಗಳಲ್ಲಿ ಬಲವಂತವಾಗಿ ಕೆಲಸ ಮಾಡಲು ಬಿಡಲಾಗುತ್ತಿತ್ತು ಎಂದು ಎನ್‌ಐಎ ತಿಳಿಸಿದೆ.
ಈ ಕಾಲ್ ಸೆಂಟರ್‌ಗಳಲ್ಲಿ ಆನ್‌ಲೈನ್ ಮೂಲಕ ಹೂಡಿಕೆ, ಕ್ರಿಪ್ಟೊ ಹಗರಣ ನಡೆಸಲಾಗುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.