ADVERTISEMENT

ರೊಹಿಂಗ್ಯಾಗಳಿಗೆ ನೆರವು, ಬೆಂಗಳೂರಿನಿಂದ ಮಾನವ ಕಳ್ಳಸಾಗಣೆ: ಆರು ಮಂದಿ ಬಂಧನ

ಬೆಂಗಳೂರಿನಿಂದ ಮಾನವ ಕಳ್ಳಸಾಗಣೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2022, 15:55 IST
Last Updated 12 ಮಾರ್ಚ್ 2022, 15:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗುವಾಹಟಿ: ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಮಾನವ ಕಳ್ಳಸಾಗಣೆ ದಂಧೆ ನಿರ್ವಹಣೆ ಹಾಗೂ ರೊಹಿಂಗ್ಯಾ ನಿರಾಶ್ರಿತರಿಗೆ ನಕಲಿ ದಾಖಲೆಗಳನ್ನು ನೀಡಿ ಭಾರತದಲ್ಲಿ ನೆಲೆಸಲು ನೆರವು ನೀಡುತ್ತಿದ್ದ ಅಸ್ಸಾಂ ಮೂಲದ ಪ್ರಮುಖ ಆರೋಪಿ ಸೇರಿದಂತೆ ಒಟ್ಟು ಆರು ಮಂದಿಯನ್ನು ರಾಷ್ಟ್ರೀಯ ತನಿಖಾ ದಳ(ಎನ್ಐಎ) ಬಂಧಿಸಿದೆ.

ಅಸ್ಸಾಂ ಮೂಲದ ಕುಮ್‌ಕುಮ್‌ ಅಹ್ಮದ್ ಚೌಧರಿ ಅಲಿಯಾಸ್ ಅಸಿಕ್ವಿಲ್ ಅಹ್ಮದ್ ಈ ದಂಧೆಯ ಪ್ರಮುಖ ರೂವಾರಿಯಾಗಿದ್ದು, ಬೆಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT