ADVERTISEMENT

ಪಿಎಫ್ಐ ಪ್ರಕರಣ: ರಾಜಸ್ಥಾನದ ಏಳು ಕಡೆ ಎನ್‌ಐಎ ಶೋಧ

ಪಿಟಿಐ
Published 18 ಫೆಬ್ರುವರಿ 2023, 14:26 IST
Last Updated 18 ಫೆಬ್ರುವರಿ 2023, 14:26 IST
ಎನ್‌ಐಎ
ಎನ್‌ಐಎ   

ನವದೆಹಲಿ: ನಿಷೇಧಿತ ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ಕಾನೂನುಬಾಹಿರ ಚಟುವಟಿಕೆಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶನಿವಾರ ರಾಜಸ್ಥಾನದ ಏಳು ಸ್ಥಳಗಳಲ್ಲಿ ಶೋಧ ನಡೆಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೋಟಾ ಜಿಲ್ಲೆಯಲ್ಲಿ ಮೂರು ಕಡೆ ಮತ್ತು ಮಾಧೋಪುರ, ಬಿಲ್‌ವಾಢ, ಬುಂಧಿ ಮತ್ತು ಜೈಪುರ ಜಿಲ್ಲೆಗಳ ತಲಾ ಒಂದು ಕಡೆ ಶಂಕಿತರ ಮನೆ ಹಾಗೂ ವ್ಯಾಪಾರ ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಡಿಜಿಟಲ್ ಉಪಕರಣ, ಏರ್ ಗನ್, ಹರಿತವಾದ ಆಯುಧ ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.

‘ಪಿಎಫ್‌ಐ ಸದಸ್ಯರಾದ ಬರಾನ್‌ನ ಸಾದಿಕ್ ಸರ್ರಾಫ್ ಮತ್ತು ಕೋಟಾದ ಮೊಹಮ್ಮದ್ ಆಸಿಫ್ ಅವರು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ಪಡೆದ ಬಳಿಕ, ಕಳೆದ ವರ್ಷ ಸೆಪ್ಟೆಂಬರ್ 19ರಂದು ಎನ್‌ಐಎ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿತ್ತು. ಬಳಿಕ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ತನಿಖೆಯು ಪ್ರಗತಿಯಲ್ಲಿದೆ’ ಎಂದು ವಕ್ತಾರರು ತಿಳಿಸಿದ್ದಾರೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.