ADVERTISEMENT

ಅಲ್‌ಕೈದಾ ಉಗ್ರ ಸಂಘಟನೆ ಜೊತೆ ನಂಟು:ಮಹಾರಾಷ್ಟ್ರದಲ್ಲೂ ಶೋಧ

ಪಿಟಿಐ
Published 12 ಫೆಬ್ರುವರಿ 2023, 5:35 IST
Last Updated 12 ಫೆಬ್ರುವರಿ 2023, 5:35 IST
.
.   

ನವದೆಹಲಿ: ‘ಅಲ್‌ಕೈದಾ ಉಗ್ರ ಸಂಘಟನೆ ಜೊತೆ ನಂಟು ಹೊಂದಿದ ಆರೋಪಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಪಾಲ್ಗರ್‌ ಹಾಗೂ ಥಾಣೆಯಲ್ಲಿ ಎನ್‌ಐಎ ಅಧಿಕಾರಿಗಳು ಶೋಧ ನಡೆಸಿದ್ದಾರೆ’ ಎಂದು ವಕ್ತಾರರೊಬ್ಬರು ಶನಿವಾರ ಹೇಳಿದ್ದಾರೆ.

‘ಶೋಧದ ವೇಳೆ ಅಧಿಕಾರಿಗಳಿಗೆ ಕೆಲ ದಾಖಲೆಗಳು ಹಾಗೂ ಡಿಜಿಟಲ್‌ ಉಪಕರಣಗಳು ದೊರೆತಿದ್ದು ಅವುಗಳನ್ನು ಜಪ್ತಿ ಮಾಡಿದ್ದಾರೆ’ ಎಂದೂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT