ADVERTISEMENT

ಮಾವೋವಾದಿ ನಂಟು: ಪಶ್ಚಿಮ ಬಂಗಾಳದ 16 ಸ್ಥಳಗಳಲ್ಲಿ NIA ಏಕಕಾಲಕ್ಕೆ ದಾಳಿ

ಪಿಟಿಐ
Published 1 ಅಕ್ಟೋಬರ್ 2024, 6:03 IST
Last Updated 1 ಅಕ್ಟೋಬರ್ 2024, 6:03 IST
ಎನ್‌ಐಎ
ಎನ್‌ಐಎ   

ಕೋಲ್ಕತ್ತ: ಮಾವೋವಾದಿಗಳ ಜತೆ ನಂಟು ಹೊಂದಿರುವ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಮಂಗಳವಾರ ಪಶ್ಚಿಮ ಬಂಗಾಳದ 16 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದೆ.

ಇಬ್ಬರು ಮಹಿಳೆಯರು ಮತ್ತು ಅವರ ಸಹಚರರು ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆಂಬ ಆರೋಪ ಮೇಲೆ ಪಶ್ಚಿಮ ಬಂಗಾಳದ ನೇತಾಜಿ ನಗರ, ಪಾನಿಹಟಿ, ಬ್ಯಾರಕ್‌ಪುರ, ಸೋದೆಪುರ, ಅಸನ್ಸೋಲ್ ಮತ್ತು ಇತರ ಹಲವು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಪೂರ್ವ ಭಾರತದಲ್ಲಿ ಮಾವೋವಾದಿ ಜಾಲವನ್ನು ವಿಸ್ತರಿಸಲು ಈ ಮಹಿಳೆಯರಿಗೆ ಹಣ ಸಂದಾಯವಾಗುತ್ತಿದೆ ಎಂಬ ಆರೋಪವಿದೆ. ಈ ಸಂಘಟನೆಯಲ್ಲಿ ಇವರು ನಿರ್ವಹಿಸುತ್ತಿರುವ ನಿಖರವಾದ ಪಾತ್ರವನ್ನು ಕಂಡುಹಿಡಿಯಲು ಈ ದಾಳಿ ನಡೆಸಲಾಗಿದೆ’ ಎಂದು ಹೇಳಿದರು.

ADVERTISEMENT

ದಾಳಿ ವೇಳೆ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.