ADVERTISEMENT

ಅಸ್ಸಾಂ ಶಾಸಕನ ವಿರುದ್ಧ ಯುಎಪಿಎಯಡಿ ಆರೋಪ ನಿಗದಿ

2019ರಲ್ಲಿ ಸಿಎಎ ವಿರೋಧಿಸಿ ಹಿಂಸಾಚಾರದ ಪ್ರತಿಭಟನೆ ನಡೆಸಿದ ಪ್ರಕರಣ; ಎನ್‌ಐಎ ತನಿಖೆ

ಪಿಟಿಐ
Published 22 ಅಕ್ಟೋಬರ್ 2024, 14:43 IST
Last Updated 22 ಅಕ್ಟೋಬರ್ 2024, 14:43 IST
ಅಖಿಲ್‌ ಗೊಗೊಯ್‌– ಪಿಟಿಐ ಚಿತ್ರ
ಅಖಿಲ್‌ ಗೊಗೊಯ್‌– ಪಿಟಿಐ ಚಿತ್ರ   

ಗುವಾಹಟಿ: ಸಿಎಎ ವಿರೋಧಿಸಿ 2019ರಲ್ಲಿ ನಡೆದ ಪ್ರತಿಭಟನೆಯಲ್ಲಿ ವಹಿಸಿದ ಪಾತ್ರಕ್ಕೆ ಸಂಬಂಧಿಸಿ, ಅಸ್ಸಾಂ ಶಾಸಕ ಅಖಿಲ್ ಗೊಗೊಯ್ ಮತ್ತು ಅವರ ಮೂವರು ಸಹಚರರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಶೇಷ ನ್ಯಾಯಾಲಯವು ಯುಎಪಿಎ ಮತ್ತು ಐಪಿಸಿ ಸೆಕ್ಷನ್‌ಗಳಡಿ ಮಂಗಳವಾರ ಆರೋಪ ನಿಗದಿಪಡಿಸಿದೆ.

ಪ್ರಕರಣದ ಎಲ್ಲ ನಾಲ್ವರು ಆರೋಪಿಗಳಿಗೆ ಕೋರ್ಟ್‌‌ ಈ ಹಿಂದೆ ಕ್ಲೀನ್ ಚಿಟ್ ನೀಡಿತ್ತು. ಇದರ ವಿರುದ್ಧ ಎನ್‌ಐಎ ಗುವಾಹಟಿ ಹೈಕೋರ್ಟ್‌ ಮೊರೆ ಹೋಗಿತ್ತು. ಈಗ ಪ್ರಕರಣದ ತನಿಖೆಯನ್ನು ಪುನಃ ಆರಂಭಿಸಲು ಮತ್ತು ಆರೋಪ ಹೊರಿಸಲು ಅವಕಾಶ ಮಾಡಿಕೊಟ್ಟಿದೆ.

ಎನ್‌ಐಎ ವಿಶೇಷ ನ್ಯಾಯಾಧೀಶ ಎಸ್‌.ಕೆ. ಶರ್ಮಾ ಅವರು ಗೊಗೊಯ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಸೆಕ್ಷನ್ 18 (ಭಯೋತ್ಪಾದಕ ಕೃತ್ಯದ ಪಿತೂರಿ) ಮತ್ತು ಐಪಿಸಿ ಸೆಕ್ಷನ್‌ಗಳು 120 ಬಿ (ಕ್ರಿಮಿನಲ್ ಪಿತೂರಿ), 153 ಎ (ವಿವಿಧ ಗುಂಪುಗಳ ನಡುವೆ ದ್ವೇಷ ಬಿತ್ತುವುದು) ಮತ್ತು 153 ಬಿ (ರಾಷ್ಟ್ರೀಯ ಸಮಗ್ರತೆಗೆ ವಿರುದ್ಧವಾಗಿ ಪೂರ್ವಾಗ್ರಹ ಪೀಡಿತ ಹೇಳಿಕೆ ನೀಡುವುದು) ಅಡಿ ಆರೋಪ ಹೊರಿಸಿದ್ದಾರೆ ಎಂದು ಗೊಗೊಯ್‌ ಅವರ ವಕೀಲ ಸಂತಾನು ಬೋರ್ತಕುರ್ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.