ADVERTISEMENT

ಛತ್ತೀಸಗಢ: ನಾಲ್ವರು ನಕ್ಸಲರ ವಿರುದ್ಧ ಆರೋಪಪಟ್ಟಿ

ಪೊಲೀಸರ ಮೇಲೆ ದಾಳಿ ನಡೆಸಿದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 14:25 IST
Last Updated 13 ಜುಲೈ 2024, 14:25 IST
. 
   

ನವದೆಹಲಿ: ಛತ್ತೀಸಗಢದಲ್ಲಿ ಪೊಲೀಸ್‌ ಸಿಬ್ಬಂದಿ ಮೇಲೆ ದಾಳಿ ನಡೆಸಿದ ನಾಲ್ವರು ನಕ್ಸಲರ ವಿರುದ್ಧ ಕೇಂದ್ರೀಯ ತನಿಖಾ ದಳವು (ಎನ್‌ಐಎ) ಆರೋಪಪಟ್ಟಿ ಸಲ್ಲಿಸಿದೆ.

ಛತ್ತೀಸಗಢದ ಜಗದಲ್‌ಪುರದ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ಸಲ್ಲಿಸಲಾಗಿರುವ ಆರೋಪಪಟ್ಟಿಯಲ್ಲಿ ಆರೋಪಿಗಳಾದ ಆಯ್ಟು ರಾಮ್‌ ನುರುತಿ, ಮನೋಜ್‌ ಕುಮಾರ್‌ ಹಿಚಮಿ, ಸುರೇಶ್‌ ನುರುತಿ ಮತ್ತು ಬುಧುರಾಮ್‌ ಪಡ್ಡಾ ಅವರನ್ನು ಹೆಸರಿಸಲಾಗಿದೆ.

ನಿಷೇಧಿತ ಸಿಪಿಐನ (ನಕ್ಸಲ್‌ ಸಂಘಟನೆ) ಸದಸ್ಯರಾಗಿರುವ ಎಲ್ಲಾ ಆರೋಪಿಗಳು ಈ ವರ್ಷದ ಜನವರಿ 16ರಂದು ಕಾಂಕೇರ್‌ನ ಛೋಟೆ ಬೇಥಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಮತ್ತು ಇತರ ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದರು ಎಂಬುದು ತನಿಖೆ ವೇಳೆ ತಿಳಿದು ಬಂದಿದೆ. ಫೆಬ್ರುವರಿಯಲ್ಲಿ ಎನ್ಐಎ ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.