ADVERTISEMENT

ಭಯೋತ್ಪಾದನೆ: ಶ್ರೀನಗರದ 9 ಕಡೆ ಎನ್ಐಎ ದಾಳಿ

ಪಿಟಿಐ
Published 22 ಏಪ್ರಿಲ್ 2024, 11:27 IST
Last Updated 22 ಏಪ್ರಿಲ್ 2024, 11:27 IST
ಎನ್ಐಎ
ಎನ್ಐಎ   

ಶ್ರೀನಗರ: ಭಯೋತ್ಪಾದನೆ ಚಟುವಟಿಕೆಗಳ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳವು (ಎನ್ಐಎ) ಸೋಮವಾರ ಜಮ್ಮು–ಕಾಶ್ಮೀರದ  ಶ್ರೀನಗರದ ಒಂಬತ್ತು ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಈ ಕಾರ್ಯಾಚರಣೆಯಲ್ಲಿ ಸ್ಥಳೀಯ ಪೊಲೀಸರು ಮತ್ತು ಸಿಆರ್‌ಪಿಎಫ್ ಸಿಬ್ಬಂದಿಯೂ ಪಾಲ್ಗೊಂಡಿದ್ದರು. 

2022ರಲ್ಲಿ ಎನ್ಐಎ ದಾಖಲಿಸಿಕೊಂಡ ಪ್ರಕರಣದ ಪ್ರಕಾರ ಭಯೋತ್ಪಾದನೆಯಲ್ಲಿ ಭಾಗಿಯಾಗಿರುವ ಶಂಕಿತರು ದಿ ರೆಸಿಸ್ಟಂಟ್ ಫ್ರಂಟ್ (ಟಿಆರ್‌ಎಫ್) ಮತ್ತು ಲಷ್ಕರ್–ಎ–ತಯಬಾ ಸಂಘಟನೆಗಳ ಜೊತೆ ನಂಟು ಹೊಂದಿದ್ದಾರೆ. ಹೀಗಾಗಿ ಪ್ರಕರಣದಲ್ಲಿ ಭಾಗಿಯಾಗಿದ್ದವರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ADVERTISEMENT

ಎಲ್ಇಟಿ ಮತ್ತು ಟಿಆರ್‌ಎಫ್ ನಿಷೇಧಿತ ಉಗ್ರ ಸಂಘಟನೆಗಳಾಗಿದ್ದು, ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ಮತ್ತು ಕಾಶ್ಮೀರ ಯುವಕರು ಭಯೋತ್ಪಾದನೆ ಸಂಘಟನೆಗಳಿಗೆ ಸೇರುವಂತೆ ಉತ್ತೇಜಿಸುವ ಕೃತ್ಯದಲ್ಲಿ ತೊಡಗಿಸಿಕೊಂಡಿವೆ. ಅಲ್ಲದೆ, ಈ ಎರಡೂ ಸಂಘಟನೆಗಳು ‘ಎಕ್ಸ್‌’, ಟೆಲಿಗ್ರಾಂ ಮತ್ತು ಯುಟ್ಯೂಬ್ ಚಾನೆಲ್‌ ರೀತಿಯ ಸಾಮಾಜಿಕ ಮಾಧ್ಯಮಗಳ ಮೂಲಕ ಭಯೋತ್ಪಾದನೆ ಚಟುವಟಿಕೆಗಳಲ್ಲಿ ತೊಡಗುವಂತೆ ಯುವಕರಿಗೆ ಆಮಿಷವೊಡ್ಡುತ್ತಿವೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.