ADVERTISEMENT

ಬಿಹಾರ | ನಕ್ಸಲ್‌ ನಂಟು ಪ್ರಕರಣ: ಜೆಡಿಯು ಮಾಜಿ ಎಂಎಲ್‌ಸಿ ನಿವಾಸದ ಮೇಲೆ NIA ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಸೆಪ್ಟೆಂಬರ್ 2024, 5:36 IST
Last Updated 19 ಸೆಪ್ಟೆಂಬರ್ 2024, 5:36 IST
   

ಗಯಾ(ಬಿಹಾರ): ನಕ್ಸಲರಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಗಯಾದ ಎ.ಪಿ ಕಾಲೋನಿ ಪ್ರದೇಶದಲ್ಲಿರುವ ಜೆಡಿಯು ಮಾಜಿ ವಿಧಾನ ಪರಿಷತ್ ಸದಸ್ಯೆ ಮನೋರಮಾ ದೇವಿ ಅವರ ನಿವಾಸದ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಇಂದು ದಾಳಿ ನಡೆಸಿದೆ.

ಮನೋರಮಾ ದೇವಿ ಮತ್ತು ಉದ್ಯಮಿ ದ್ವಾರಿಕಾ ಯಾದವ್ ಅವರ ನಿವಾಸದಲ್ಲಿ ಎನ್‌ಐಎ ಅಧಿಕಾರಿಗಳು ಶೋಧ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದಾಳಿ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಗಯಾ ಎಸ್‌ಎಸ್‌ಪಿ ಆಶಿಶ್ ಭಾರ್ತಿ, ‘ಶೋಧ ಕಾರ್ಯಕ್ಕಾಗಿ ಭದ್ರತಾ ಸಿಬ್ಬಂದಿ ಒದಗಿಸುವಂತೆ ಜಿಲ್ಲಾ ಪೊಲೀಸರಿಗೆ ಎಎನ್‌ಐ ಮನವಿ ಮಾಡಿತ್ತು’ ಎಂದು ಹೇಳಿದರು.

ADVERTISEMENT

ಸಿಪಿಐ ಮಾವೋವಾದಿ(ನಕ್ಸಲ್‌) ಕಾರ್ಯಕರ್ತರೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಮನೋರಮಾ ದೇವಿ ಅವರ ಕುಟುಂಬ ಸದಸ್ಯರನ್ನು ಈ ಹಿಂದೆ ಬಂಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.