ADVERTISEMENT

ಮೀನುಗಾರರನ್ನು ಬಿಡುಗಡೆಗೊಳಿಸುವಂತೆ ಕೋರಿ ಕೇಂದ್ರಕ್ಕೆ ಎಂ.ಕೆ ಸ್ಟಾಲಿನ್‌ ಪತ್ರ

ಪಿಟಿಐ
Published 24 ಜುಲೈ 2024, 15:30 IST
Last Updated 24 ಜುಲೈ 2024, 15:30 IST
ಎಂ.ಕೆ. ಸ್ಟಾಲಿನ್‌
ಎಂ.ಕೆ. ಸ್ಟಾಲಿನ್‌   

ಚೆನ್ನೈ: ಶ್ರೀಲಂಕಾ ನೌಕಾಪಡೆ ಮತ್ತೆ ಬಂಬತ್ತು ಮೀನುಗಾರರನ್ನು ಬಂಧಿಸಿದ್ದು, ತ್ವರಿತವಾಗಿ ಅವರನ್ನು ಬಿಡುಗಡೆಗೊಳಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಕೇಂದ್ರ ಸರ್ಕಾರಕ್ಕೆ ಬುಧವಾರ ಪತ್ರ ಬರೆದಿದ್ದಾರೆ.

ಈ ಸಂಬಂಧ ವಿದೇಶಾಂಗ ಸಚಿವ ಜೈ ಶಂಕರ್‌ ಅವರಿಗೆ ಪತ್ರ ಬರೆದಿರುವ ಸ್ಟಾಲಿನ್, 22 ಜುಲೈ 2024ರಂದು ರಾಮೇಶ್ವರಂ ಮೂಲದ ಒಂಬತ್ತು ಮೀನುಗಾರರನ್ನು ಮತ್ತು ಅವರ ಎರಡು ಮೀನುಗಾರಿಕಾ ದೋಣಿಗಳನ್ನು ಶ್ರೀಲಂಕಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮೀನುಗಾರರನ್ನು ಬಂಧಿಸುವುದು, ಅವರ ಮೀನುಗಾರಿಕಾ ದೋಣಿಗಳನ್ನು ವಶಪಡಿಸಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದ ಮೀನುಗಾರರು ಆತಂಕದಲ್ಲಿ ಇದ್ದಾರೆ. ಈ ಪರಿಸ್ಥಿತಿಯನ್ನು ಸರಾಗಗೊಳಿಸಲು ರಾಜತಾಂತ್ರಿಕ ಮಾರ್ಗಗಳ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ADVERTISEMENT

ಶ್ರೀಲಂಕಾದಿಂದ ಬಿಡುಗಡೆಗೊಂಡಿರುವ 87 ಮೀನುಗಾರರು ಮತ್ತು 175‌ ದೋಣಿಗಳನ್ನು ಸುರಕ್ಷಿತವಾಗಿ ತಮಿಳುನಾಡಿಗೆ ಕರೆತರುವಂತೆಯೂ ಎಂ.ಕೆ ಸ್ಟಾಲಿನ್‌ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.