ತಿರುವನಂತಪುರ: ಕೇರಳದ ವಯನಾಡ್ ಜಿಲ್ಲೆಯ ಬಾವಲಿಗಳಲ್ಲಿ ನಿಪಾ ವೈರಸ್ ಇರುವುದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಪತ್ತೆಹಚ್ಚಿದೆ.
ವಯನಾಡ್‌ನ ಮಾನಂದವಾಡಿ ಮತ್ತು ಸುಲ್ತಾನ್ ಬತ್ತೇರಿ ಪ್ರದೇಶದಿಂದ ಬಾವಲಿಗಳ ಮಾದರಿ ಸಂಗ್ರಹಿಸಿ ಐಸಿಎಂಆರ್‌ಗೆ ಕಳುಹಿಸಲಾಗಿತ್ತು.
ನಿಪಾ ಸೋಂಕು ಮರುಕಳಿಸಲು ಕಾರಣವೇನು ಎಂಬುದನ್ನು ಪತ್ತೆ ಹಚ್ಚುವ ಸಲುವಾಗಿ ರಾಜ್ಯದ ವಿವಿಧೆಡೆಗಳಿಂದಲೂ ಬಾವಲಿಗಳ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
‘ನಿಪಾ ರೋಗ ಲಕ್ಷಣ ಕಂಡು ಬರುವ ರೋಗಿಗಳ ಮೇಲೆ ನಿಗಾ ವಹಿಸುವಂತೆ ಆರೋಗ್ಯ ಕಾರ್ಯಕರ್ತರಿಗೆ ಸೂಚಿಸಲಾಗಿದೆ. ಆತಂಕ ಪಡುವ ಅಗತ್ಯವಿಲ್ಲ’ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಕಳೆದ ತಿಂಗಳು ಕೋಯಿಕ್ಕೋಡ್‌ನಲ್ಲಿ ನಿಪಾ ಬಾಧಿಸಿ ಇಬ್ಬರು ಮೃತಪಟ್ಟಿದ್ದರು. ನಾಲ್ವರು ಸೋಂಕಿತರು ಗುಣಮುಖರಾಗಿದ್ದರು.
ಈ ಪ್ರದೇಶದಿಂದ ಸಂಗ್ರಹಿಸಿದ್ದ ಬಾವಲಿಗಳ ಮಾದರಿಯಲ್ಲಿ ನಿಪಾದ ಪ್ರತಿಕಾಯಗಳನ್ನೂ ಐಸಿಎಂಆರ್ ಪತ್ತೆ ಹಚ್ಚಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.