ADVERTISEMENT

ನಿರ್ಭಯಾ ಅತ್ಯಾಚಾರ ಪ್ರಕರಣ: ಅಂದಿನಿಂದ ಇಂದಿನವರೆಗೆ ಏನೇನಾಯ್ತು?

ಟೈಮ್‌ಲೈನ್

ಏಜೆನ್ಸೀಸ್
Published 7 ಜನವರಿ 2020, 12:02 IST
Last Updated 7 ಜನವರಿ 2020, 12:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದೆಹಲಿಯ ಯುವತಿ ‘ನಿರ್ಭಯಾ’ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ದುರುಳರಿಂದ ಬಸ್‌ನಿಂದಹೊರದಬ್ಬಿಸಿಕೊಂಡ ಆ ದಿನಕ್ಕೆ ಈಗ 7 ವರ್ಷಗಳು (2012ರ ಡಿಸೆಂಬರ್ 16) ಕಳೆದಿವೆ. ಇದಾದ ನಂತರ ಆರೋಪಿಗಳ ಬಂಧನ, ಆರೋಪಪಟ್ಟಿ ಸಲ್ಲಿಕೆ, ತನಿಖೆ, ವಿಚಾರಣೆ, ತೀರ್ಪು, ಮೇಲ್ಮನವಿ ಹೀಗೆ ಹಲವು ಪ್ರಕ್ರಿಯೆಗಳು ನಡೆದಿವೆ.ಕಳೆದ ಏಳು ವರ್ಷಗಳಲ್ಲಿ‘ನಿರ್ಭಯಾ’ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ನಡೆದ ಪ್ರಮುಖ ಘಟನಾವಳಿಗಳ ಟೈಮ್‌ಲೈನ್ ಇಲ್ಲಿದೆ:

* 2012ರ ಡಿಸೆಂಬರ್ 16: ದೆಹಲಿಯಲ್ಲಿ ರಾತ್ರಿ 23 ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ. ಬರ್ಬರ ಹಲ್ಲೆ ನಡೆಸಿ, ಚಲಿಸುವ ಬಸ್‌ನಿಂದ ಎಸೆದಿದ್ದ ದುಷ್ಕರ್ಮಿಗಳು

* 2012ರ ಡಿಸೆಂಬರ್ 17: ಅತ್ಯಾಚಾರ ಖಂಡಿಸಿದೇಶದಾದ್ಯಂತ ವ್ಯಾಪಕ ಪ್ರತಿಭಟನೆ, ಅತ್ಯಾಚಾರಿಗಳ ವಿರುದ್ಧ ಜನಾಕ್ರೋಶ

ADVERTISEMENT

* 2012ರ ಡಿಸೆಂಬರ್ 27: ಸಿಂಗಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾದನಿರ್ಭಯಾ

*2012ರ ಡಿಸೆಂಬರ್ 29: ಗಂಭೀರ ಸ್ಥಿತಿಯಲ್ಲಿದ್ದ ‘ನಿರ್ಭಯಾ’ ಸಿಂಗಪುರದ ಆಸ್ಪತ್ರೆಯಲ್ಲಿ ಸಾವು

* 2013 ಜನವರಿ 28: ಪ್ರಕರಣದ ಆರನೇ ಆರೋಪಿ ಅಪ್ರಾಪ್ತ ಎಂದು ಬಾಲ ನ್ಯಾಯ ಮಂಡಳಿ ಘೋಷಣೆ

* 2013 ಫೆಬ್ರುವರಿ 2: ಐವರು ಆರೋಪಿಗಳ ವಿರುದ್ಧ ಕೊಲೆಯೂ ಸೇರಿ 13 ಅಪರಾಧ ಪ್ರಕರಣ ದಾಖಲು

* 2013 ಮಾರ್ಚ್‌ 11: ಆರು ಆರೋಪಿಗಳ ಪೈಕಿ ರಾಮ್‌ಸಿಂಗ್ ಎಂಬಾತ ಜೈಲಿನಲ್ಲಿ ಖಿನ್ನತೆಯಿಂದ ಆತ್ಮಹತ್ಯೆ

*2013 ಮಾರ್ಚ್‌ 21: ಅತ್ಯಾಚಾರಕ್ಕೆ ಸಂಬಂಧಿಸಿ ಕಾನೂನಿನಲ್ಲಿ ತಿದ್ದುಪಡಿ, ಕಠಿಣ ಶಿಕ್ಷೆ ನೀಡಲು ಅವಕಾಶ

*2013 ಆಗಸ್ಟ್‌ 31: ಬಾಲಾಪರಾಧಿಗೆ ಮೂರು ವರ್ಷ ರಿಮಾಂಡ್‌ ಹೋಮ್‌ನಲ್ಲಿ ಶಿಕ್ಷೆ; ಬಿಡುಗಡೆ

* 2013 ಸೆಪ್ಟೆಂಬರ್ 10: ವಿಚಾರಣೆ ಪೂರ್ಣಗೊಳಿಸಿದ ತ್ವರಿತಗತಿಯ ನ್ಯಾಯಾಲಯ, ಆರೋಪ ಸಾಬೀತು

* 2013 ಸೆಪ್ಟೆಂಬರ್ 13: ಅಪರಾಧಿಗಳಿಗೆ ಮರಣದಂಡನೆ ವಿಧಿಸಿದತ್ವರಿತಗತಿಯ ನ್ಯಾಯಾಲಯ. ಮರಣದಂಡನೆ ದೃಢೀಕರಿಸುವಂತೆ ದೆಹಲಿ ಹೈಕೋರ್ಟ್‌ಗೆ ಶಿಫಾರಸು

* 2013 ನವೆಂಬರ್ 1: ಪ್ರತಿದಿನ ವಿಚಾರಣೆ ಆರಂಭಿಸಿದ ದೆಹಲಿ ಹೈಕೋರ್ಟ್‌

* 2014 ಮಾರ್ಚ್‌ 13: ನಾಲ್ವರು ಅಪರಾಧಿಗಳಿಗೆ ವಿಧಿಸಲಾಗಿರುವ ಮರಣದಂಡನೆ ಎತ್ತಿಹಿಡಿದ ದೆಹಲಿ ಹೈಕೋರ್ಟ್‌

* 2016 ಏಪ್ರಿಲ್ 3: ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಆರಂಭ

* 2017 ಮಾರ್ಚ್ 27: ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

* 2017 ಮೇ 5: ಅಕ್ಷಯ್, ವಿನಯ್ ಶರ್ಮಾ, ಪವನ್ ಗುಪ್ತಾ ಮತ್ತು ಮುಕೇಶ್ ಸಿಂಗ್‌ಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆ ಎತ್ತಿಹಿಡಿದ ಸುಪ್ರೀಂ ಕೋರ್ಟ್

* 2018 ಜುಲೈ 9:ಪವನ್, ಮುಕೇಶ್ ಮತ್ತು ವಿನಯ್ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

* 2018 ಡಿಸೆಂಬರ್ 13: ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಗೊಳಿಸುವಂತೆ ಮನವಿ ಮಾಡಿ ದೆಹಲಿಯ ಪಾಟಿಯಾಲ ಹೌಸ್ ನ್ಯಾಯಾಲಯಕ್ಕೆ ನಿರ್ಭಯಾ ಪೋಷಕರಿಂದ ಮನವಿ

* 2019 ಅಕ್ಟೋಬರ್ 29: ಅಪರಾಧಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಲು ಅವಕಾಶ ನೀಡಿಕೆ

* 2019 ನವೆಂಬರ್ 8: ಕ್ಷಮಾದಾನ ಅರ್ಜಿ ಸಲ್ಲಿಸಿದ ವಿನಯ್ ಶರ್ಮಾ

* 2019 ಡಿಸೆಂಬರ್ 6:ವಿನಯ್ ಶರ್ಮಾಕ್ಷಮಾದಾನ ಅರ್ಜಿ ತಿರಸ್ಕರಿಸುವಂತೆ ದೆಹಲಿ ಸರ್ಕಾರದಿಂದ ರಾಷ್ಟ್ರಪತಿಗಳಿಗೆ ಶಿಫಾರಸು

*2019 ಡಿಸೆಂಬರ್ 10: ಅಪರಾಧಿ ಅಕ್ಷಯ್‌ನಿಂದ ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಕೆ

*2019 ಡಿಸೆಂಬರ್ 17:ಮರುಪರಿಶೀಲನಾ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ

*2019 ಡಿಸೆಂಬರ್ 18:ಮರುಪರಿಶೀಲನಾ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌. ಕ್ಷಮಾದಾನ ಅರ್ಜಿ ಸಲ್ಲಿಸಲು ಅಕ್ಷಯ್‌ಗೆ 3 ವಾರಗಳ ಕಾಲಾವಕಾಶ

2020 ಜನವರಿ 7: ನಿರ್ಭಯಾ ಪ್ರಕರಣದ ಅಪರಾಧಿಗಳಾದಅಕ್ಷಯ್ ಸಿಂಗ್,ಮುಕೇಶ್ ಸಿಂಗ್, ಪವನ್ ಗುಪ್ತಾ ಮತ್ತು ವಿನಯ್ ಶರ್ಮಾಗೆವಿಧಿಸಿದ್ದ ಗಲ್ಲು ಶಿಕ್ಷೆ ಜಾರಿಗೆ ಜನವರಿ 22 ಬೆಳಗ್ಗೆ 7 ಗಂಟೆಗೆ ಸಮಯ ನಿಗದಿಪಡಿಸಿದ ನ್ಯಾಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.