ADVERTISEMENT

ಫೂಲನ್‌ ದೇವಿ ಹತ್ಯೆ: ಸಿಬಿಐ ತನಿಖೆಗೆ ಕೋರಿ ಕೇಂದ್ರಕ್ಕೆ ಸಂಜಯ್‌ ನಿಶಾದ್‌ ಪತ್ರ

ಐಎಎನ್ಎಸ್
Published 25 ಜುಲೈ 2023, 12:42 IST
Last Updated 25 ಜುಲೈ 2023, 12:42 IST
ಫೂಲನ್‌ ದೇವಿ
ಫೂಲನ್‌ ದೇವಿ    

ಲಖನೌ: ಫೂಲನ್‌ ದೇವಿ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಕೋರಿ ಉತ್ತರ ಪ್ರದೇಶದ ಸಚಿವ, ನಿಶಾದ್ ಪಕ್ಷದ ಅಧ್ಯಕ್ಷ ಡಾ. ಸಂಜಯ್‌ ನಿಶಾದ್‌ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

‘ಡಕಾಯಿತರ ರಾಣಿ’ ಎಂದೇ ಖ್ಯಾತರಾಗಿರುವ ಫೂಲನ್‌ ದೇವಿ ಸಂಸದೆಯಾಗಿದ್ದರು. 2001ರ ಜುಲೈನಲ್ಲಿ ಅವರನ್ನು ಹತ್ಯೆ ಮಾಡಲಾಗಿತ್ತು. ಫೂಲನ್ ದೇವಿಯ ಆಸ್ತಿಯನ್ನು ಅತಿಕ್ರಮಣದಿಂದ ಮುಕ್ತಗೊಳಿಸಿ ಆಕೆಯ ತಾಯಿ ಮುಲಾದೇವಿಗೆ ನೀಡಬೇಕು ಎಂದು ಸಂಜಯ್‌ ಒತ್ತಾಯಿಸಿದ್ದಾರೆ.

‘ಮಾಜಿ ಸಂಸದೆ, ನಾಯಕಿ ಫೂಲನ್‌ ದೇವಿ ಅವರು ಕೇವಲ ಮೀನುಗಾರ ಸಮಾಜಕ್ಕೆ ಮಾತ್ರವಲ್ಲ, ವಿಶ್ವ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಸಮಾಜವನ್ನು ಜಾಗೃತಗೊಳಿಸಲು ಅನ್ಯಾಯದ ವಿರುದ್ಧ ಹಾಗೂ ಮಹಿಳೆಯರ ಮೇಲಿನ ಶೋಷಣೆ, ಮಹಿಳೆಯರ ಹಕ್ಕು ಮತ್ತು ಘನತೆಯನ್ನು ಕಾಪಾಡಲು ಫೂಲನ್‌ ದೇವಿ ಹೋರಾಡಿದ್ದಾರೆ ಎಂದು ಸಂಜಯ್‌ ನಿಶಾದ್‌ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ADVERTISEMENT

‘ನಿಶಾದ್‌ ಪಕ್ಷವು ಫೂಲನ್‌ ದೇವಿ ಅವರ ಆದರ್ಶ ಮತ್ತು ಹಾದಿಯನ್ನು ಅನುಸರಿಸುವ ಪಕ್ಷವಾಗಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಿಶಾದ್‌ ಪಕ್ಷವು ಶೋಷಿತರು ಮತ್ತು ಹಿಂದುಳಿದವರ ಹಿತಕ್ಕಾಗಿ ಸದಾ ಧ್ವನಿ ಎತ್ತುತ್ತಿದೆ ಎಂದು ಸಂಜಯ್‌ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.