ಕೋಯಿಕ್ಕೋಡ್ (ಕೇರಳ): ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ನಾಥೂರಾಂ ಗೋಡ್ಸೆಯನ್ನು ವೈಭವೀಕರಿಸಿ ಫೇಸ್‌ಬುಕ್‌ನಲ್ಲಿ ಕಮೆಂಟ್ ಮಾಡಿರುವ ಪ್ರಾಧ್ಯಾಪಕಿ ವಿರುದ್ಧ ತನಿಖೆ ನಡೆಸಲು ಕ್ಯಾಲಿಕಟ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ(ಎನ್‌ಐಟಿ) ಸಮಿತಿಯನ್ನು ರಚಿಸಿದೆ.
‘ಸಮಿತಿಯ ವರದಿ ಆಧರಿಸಿ ಪ್ರೊ.ಎ.ಶೈಜಾ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮಹಾತ್ಮ ಗಾಂಧಿಯ ತತ್ವ ಮತ್ತು ಸಿದ್ದಾಂತಗಳಿಗೆ ವಿರುದ್ಧವಾದ ಹೇಳಿಕೆಯನ್ನು ಎನ್‌ಐಟಿ ಯಾವತ್ತಿಗೂ ಬೆಂಬಲಿಸುವುದಿಲ್ಲ’ ಎಂದು ಎನ್‌ಐಟಿ ಶನಿವಾರ ತಿಳಿಸಿದೆ.
ಫೇಸ್‌ಬುಕ್‌ನಲ್ಲಿ ಗೋಡ್ಸೆ ಚಿತ್ರವೊಂದಕ್ಕೆ ಪ್ರತಿಕ್ರಿಯಿಸಿದ್ದ ಶೈಜಾ ಅವರು, ‘ದೇಶವನ್ನು ರಕ್ಷಿಸಿರುವ ಗೋಡ್ಸೆ ಬಗ್ಗೆ ಹೆಮ್ಮೆಯಿದೆ’ ಎಂದು ಕಮೆಂಟ್ ಮಾಡಿದ್ದರು. ಪ್ರೊ.ಶೈಜಾ ವಿರುದ್ಧ ಹಲವಾರು ವಿದ್ಯಾರ್ಥಿ ಸಂಘಟನೆಗಳು ದೂರು ದಾಖಲಿಸಿದ್ದವು. ಶೈಜಾ ಮೇಲೆ ಎಫ್‌ಐಆರ್ ಕೂಡಾ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.