ಕೈಲಾಸ: ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ‘ಕೈಲಾಸ’ ದೇಶ ಘೋಷಣೆ ಮಾಡಿರುವುದು ಎಲ್ಲರಿಗೂ ತಿಳಿದಿದೆ. ಇದೀಗ ಆ ದೇಶಕ್ಕೆ ಭಾರತದಿಂದ ಪ್ರಯಾಣಿಸುವವರಿಗೆ ನಿರ್ಬಂಧ ವಿಧಿಸಲಾಗಿದೆ.
ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತದಿಂದ ಕೈಲಾಸಕ್ಕೆ ಪ್ರಯಾಣಿಸುವವರಿಗೆನಿರ್ಬಂಧ ವಿಧಿಸಿರುವುದಾಗಿ ನಿತ್ಯಾನಂದ ಪ್ರಕಟಿಸಿದ್ದಾನೆ.
ಭಾರತ ಸೇರಿದಂತೆ ಬ್ರೆಜಿಲ್, ಯೂರೋಪ್ ದೇಶಗಳು, ಮಲೇಷ್ಯಾಗಳಿಂದ ಕೈಲಾಸಕ್ಕೆ ಬರುವವರಿಗೆ ಪ್ರವೇಶ ನಿಷೇಧಿಸಲಾಗಿದೆ. ಕೈಲಾಸದ ಎಲ್ಲಾ ರಾಯಭಾರಿ ಕಚೇರಿಗಳನ್ನು ಸಹ ಕೋವಿಡ್ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದೆ ಎಂದು ನಿತ್ಯಾನಂದನ ಅಧಿಕೃತ ಟ್ವೀಟರ್‌ನಲ್ಲಿ ಬರೆಯಲಾಗಿದೆ.
ಭಾರತದಲ್ಲಿ ಕಳೆದ ಎರಡು ದಿನಗಳಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ನಿತ್ಯ 3 ಲಕ್ಷ ದಾಟುತ್ತಿರುವುದು ಕಳವಳಕರಿಯಾಗಿದೆ.
ಕೈಲಾಸ ಎಂಬುದು ನಿತ್ಯಾನಂದ ಸ್ಥಾಪಿಸಿರುವ ಹೊಸ ದೇಶದ ಹೆಸರು. ಕೈಲಾಸದ ಬಗ್ಗೆ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ ಜಗತ್ತಿನಲ್ಲಿರುವ ಹಿಂದೂಗಳಿಗಾಗಿ ನಿರ್ಮಿಸಿರುವ ಗಡಿ ರಹಿತ ದೇಶವಾಗಿದೆ.
ಕೈಲಾಸ ಡಾಟ್ ಆರ್ಗ್ ಎಂಬ ವೆಬ್‌ಸೈಟ್ ಏಪ್ರಿಲ್ 2019ರ ನಂತರ ಆರಂಭವಾಗಿದ್ದು ನಿತ್ಯಾನಂದ ಹಾಗೂ ಕೈಲಾಸ ದೇಶದ ವಿವರಣೆಯೂ ಈ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಆದರೆ ಈ ದೇಶ ಎಲ್ಲಿದೆ ಎಂಬುದರ ಬಗ್ಗೆ ನಿರ್ದಿಷ್ಟ ಮಾಹಿತಿ ಇಲ್ಲಿಲ್ಲ.
ಕೆಲವು ವರದಿಗಳ ಪ್ರಕಾರ ನಿತ್ಯಾನಂದ ಈಕ್ವೆಡಾರ್‌ನಲ್ಲಿ ಹೊಸ ದ್ವೀಪ ಖರೀದಿಸಿದ್ದು, ಅದಕ್ಕೆ ರಾಷ್ಟ್ರೀಯ ಮಾನ್ಯತೆ ನೀಡಲು ವಿಶ್ವ ಸಂಸ್ಥೆಗೆ ಮನವಿ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿ ನೋಡಿದರೆ ಕೈಲಾಸ ಎಂಬುದು ನಿಜವಾಗಿಯೂ ದೇಶವೇ ಅಥವಾ ಕಲ್ಪಿತ ಕಥೆಯೋ ಎಂಬುದು ಸ್ಪಷ್ಟವಾಗುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.