ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಘೋಷಿಸಿದ ‘ಕನಿಷ್ಠ ಆದಾಯ ಯೋಜನೆವಿರುದ್ಧ ಹೇಳಿಕೆ ನೀಡಿದ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ.
ಚುನಾವಣಾ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವ ಬಡವರಿಗೆ ವರ್ಷಕ್ಕೆ ₹72 ಸಾವಿರ ಕನಿಷ್ಠ ಆದಾಯ ನೀಡುವ ಯೋಜನೆ ಕುರಿತು ರಾಹುಲ್ ಮಾತನಾಡಿದ್ದರು. ಇದನ್ನು ಪ್ರಶ್ನಿಸಿ ರಾಜೀವ್ ಅವರು ಸರಣಿ ಟ್ವೀಟ್ ಮಾಡಿದ್ದರು.
ರಾಹುಲ್ ಅವರ ಈ ಯೋಜನೆ ಹಣಕಾಸುಬಿಕ್ಕಟ್ಟಿನಯೋಜನೆ.ಸೋಮಾರಿತನಕ್ಕೆ ಉತ್ತೇಜನ. ಹಾಗಾಗಿ ಇದನ್ನು ಎಂದಿಗೂ ಜಾರಿಗೆ ತರಲಾಗುವುದಿಲ್ಲ ಎಂದು ರಾಜೀವ್ ಟ್ವೀಟ್ ಮಾಡಿದ್ದರು.
ಇದರೊಟ್ಟಿಗೆ ಮತ್ತೊಂದು ಟ್ವೀಟ್ ಮಾಡಿದ ರಾಜೀವ್, ಕಾಂಗ್ರೆಸ್ 1971ರಲ್ಲಿ ಗರೀಬಿಹಠಾವೋ (ಬಡತನ ನಿರ್ಮೂಲನೆ), 2008ರಲ್ಲಿ ಒಂದು ಶ್ರೇಣಿ, ಒಂದು ಪಿಂಚಣಿ, 2013ರಲ್ಲಿ ಆಹಾರ ಸುರಕ್ಷತೆ ಎಂಬ ಘೋಷಣೆಗಳನ್ನು ಮೊಳಗಿಸಿತ್ತು. ಆದರೆ ಇದ್ಯಾವುದೂ ಜಾರಿಗೆ ತಂದಿಲ್ಲ. ಇದರ ಸಾಲಿಗೆ ದುರಾದೃಷ್ಟವಶಾತ್ ಕನಿಷ್ಠ ಆದಾಯ ನೀತಿಯೂ ಸೇರಿಕೊಳ್ಳಲಿದೆ ಎಂದು ಟೀಕೆ ಮಾಡಿದ್ದರು.
ಕನಿಷ್ಠ ಆದಾಯ ಯೋಜನಾ ವೆಚ್ಚವು ಶೇ 2 ಜಿಡಿಪಿ ಹಾಗೂ ಬಜೆಟ್‌ನ ಶೇ 13ರಷ್ಟಿದೆ. ಇದು ಜನರ ಮೂಲಭೂತ ಅಗತ್ಯತೆಗಳ ಬಗ್ಗೆ ಅತೃಪ್ತಿ ಮೂಡಿಸುತ್ತದೆ.
ಈ ಯೋಜನೆಯು ಹಣಕಾಸಿನ ಸಮತೋಲನವನ್ನು ಪ್ರತಿಬಿಂಬಿಸುತ್ತದೆ ಎಂದೂ ಟ್ವೀಟ್ ಮಾಡಿದ್ದರು.
ಯಾವ ಕುಟುಂಬದ ಆದಾಯ ತಿಂಗಳಿಗೆ 12 ಸಾವಿರಕ್ಕಿಂತ ಕಡಿಮೆ ಇದೆಯೋ ಅಂತಹ ಕುಟುಂಬ ಖಾತೆಗೆ ಪ್ರತಿ ತಿಂಗಳು 6 ಸಾವಿರದಂತೆ ವರ್ಷಕ್ಕೆ 72 ಸಾವಿರ ಆದಾಯ ಸಿಗಲಿದೆ ಎಂದು ರಾಹುಲ್ ಘೋಷಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.