ADVERTISEMENT

ವ್ಯಕ್ತಿಗತ ನೆಲೆಯಲ್ಲಿ ಬಡತನ ನಿರ್ಮೂಲನೆ ಅಗತ್ಯ: ಮೋದಿ

ನೀತಿ ಆಯೋಗದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 16:20 IST
Last Updated 27 ಜುಲೈ 2024, 16:20 IST
<div class="paragraphs"><p>ನವದೆಹಲಿಯಲ್ಲಿ ಶನಿವಾರ ನಡೆದ ನೀತಿ ಆಯೋಗದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.</p></div>

ನವದೆಹಲಿಯಲ್ಲಿ ಶನಿವಾರ ನಡೆದ ನೀತಿ ಆಯೋಗದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.

   

–ಪಿಟಿಐ ಚಿತ್ರ 

ನವದೆಹಲಿ: ಬಡತನ ನಿರ್ಮೂಲನೆಗಾಗಿ ನಡೆಸುವ ಪ್ರಯತ್ನಗಳು ಕಾರ್ಯಕ್ರಮಗಳಿಗೆ  ಮಾತ್ರ ಸೀಮಿತವಾಗದೇ, ವ್ಯಕ್ತಿಗತ ನೆಲೆಯಲ್ಲಿ ಕಾರ್ಯಗತಗೊಳಿಸುವುದು ಅಗತ್ಯ’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಪ್ರತಿಪಾದಿಸಿದ್ದಾರೆ.

ADVERTISEMENT

ನೀತಿ ಆಯೋಗದ  9ನೇ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ‘ವಿಕಸಿತ ಭಾರತ ನನಸಾಗಬೇಕಾದರೆ ಬಡತನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ನಮ್ಮ ಗುರಿಯಾಗಬೇಕು. ಈ ಪ್ರಯತ್ನ ಗ್ರಾಮ ಮಟ್ಟದಿಂದ ಆರಂಭವಾಗಬೇಕು’ ಎಂದೂ ಹೇಳಿದ್ದಾರೆ.

ಸಭೆಯಲ್ಲಿ ಚರ್ಚೆಯಾದ ವಿಷಯಗಳ ಕುರಿತು, ಆಯೋಗದ ಸಿಇಒ ಬಿ.ವಿ.ಆರ್‌.ಸುಬ್ರಹ್ಮಣ್ಯಂ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಆಯೋಗದ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ಇದು ಅವರಿಗಾದ ನಷ್ಟ’ ಎಂದರು.

‘ರಾಜ್ಯಗಳು ಹೂಡಿಕೆ ಸ್ನೇಹಿ ವಾತಾವರಣ ನಿರ್ಮಿಸಬೇಕು. ಈ ಸಂಬಂಧ ‘ಹೂಡಿಕೆ ಸ್ನೇಹಿ ಸನ್ನದು’ ಸಿದ್ಧಪಡಿಸುವಂತೆ ಪ್ರಧಾನಿಯವರು ಆಯೋಗಕ್ಕೆ ನಿರ್ದೇಶನ ನೀಡಿದರು’ ಎಂದು ಸುಬ್ರಹ್ಮಣ್ಯಂ ತಿಳಿಸಿದರು.

‘ವಿದೇಶಿ ನೇರ ಬಂಡವಾಳ ಆಕರ್ಷಿಸಲು ರಾಜ್ಯಗಳ ನಡುವೆ ಪೈಪೋಟಿ ಇರಬೇಕು. ಇದರಿಂದ ಎಲ್ಲ ರಾಜ್ಯಗಳಿಗೆ ಹೂಡಿಕೆಗಳು ಹರಿದುಬರಲಿವೆ ಎಂಬುದಾಗಿ ಪ್ರಧಾನಿ ಹೇಳಿದರು’ ಎಂದು ಆಯೋಗದ ಉಪಾಧ್ಯಕ್ಷ ಸುಮನ್‌ ಬೆರಿ ಹೇಳಿದರು.

ಪ್ರಧಾನಿ ಮೋದಿ ಸೂಚನೆ/ಸಲಹೆಗಳು

* ಹೂಡಿಕೆ ಆಕರ್ಷಿಸಲು ಉತ್ತೇಜನಕಾರಿ ಕ್ರಮಗಳಿಗಿಂತ ಕಾನೂನು–ಸುವ್ಯವಸ್ಥೆ, ಉತ್ತಮ ಆಡಳಿತ ಹಾಗೂ ಮೂಲಸೌಕರ್ಯಗಳಿಗೆ ಮಹತ್ವ ಇದೆ

* ಜಲ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಗೆ ರಾಜ್ಯಗಳ ಮಟ್ಟದಲ್ಲಿ ‘ನದಿಗಳ ಗ್ರಿಡ್‌’ ಸ್ಥಾಪಿಸಬೇಕು

* ಅಭಿವೃದ್ಧಿಗೆ ಪೂರಕವಾದ ನೀತಿ ನಿರೂಪಣೆ ಹಾಗೂ ಆಡಳಿತಾತ್ಮಕ ಸುಧಾರಣೆಗೆ ರಾಜ್ಯಗಳು ಒತ್ತು ನೀಡಬೇಕು

* ಯುವ ಜನತೆ ತರಬೇತಿ ಮತ್ತು ಕೌಶಲ ವೃದ್ಧಿಗೆ ಗಮನ ಹರಿಸಬೇಕು. ಆ ಮೂಲಕ ಉದ್ಯೋಗ–ಸನ್ನದ್ಧರಾಗಬೇಕು

* ಕೃಷಿ ಉತ್ಪಾದನೆ ಹೆಚ್ಚಳ ಹಾಗೂ ವೈವಿಧ್ಯತೆಗೆ ಒತ್ತು ನೀಡಬೇಕು. 

* ರೈತರಿಗೆ ತ್ವರಿತವಾಗಿ ಆದಾಯ ಖಾತ್ರಿಪಡಿಸುವ ನೈಸರ್ಗಿಕ ಕೃಷಿ, ಮಣ್ಣಿನ ಫಲವತ್ತತೆ ಹೆಚ್ಚಳದಂತಹ ಕ್ರಮಗಳಿಗೆ ರಾಜ್ಯಗಳು ಉತ್ತೇಜನ ನೀಡಬೇಕು

ನವದೆಹಲಿಯಲ್ಲಿ ಶನಿವಾರ ನಡೆದ ನೀತಿ ಆಯೋಗದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಸಚಿವರಾದ ಮನೋಹರಲಾಲ್‌ ಖಟ್ಟರ್‌ ಶಿವರಾಜ ಸಿಂಗ್‌ ಚೌಹಾಣ್ ನಿತಿನ್‌ ಗಡ್ಕರಿ ರಾಜನಾಥ್‌ ಸಿಂಗ್‌ ಅಮಿತ್‌ ಶಾ ಮತ್ತಿರರು ಪಾಲ್ಗೊಂಡಿದ್ದರು –ಪಿಟಿಐ ಚಿತ್ರ  **EDS: IMAGE VIA PMO** New Delhi: Prime Minister Narendra Modi Union Home Minister Amit Shah Union Defence Minister Rajnath Singh and others during the NITI Aayog Governing Council meeting in New Delhi Saturday July 27 2024. (PTI Photo) (PTI07_27_2024_000377B)
ವಿಕಸಿತ ರಾಜ್ಯಗಳ ಮೂಲ ವಿಕಸಿತ ಭಾರತ ಆಶಯ ಈಡೇರುವುದು. ವಿಕಸಿತ ಭಾರತದ ಆಶಯ ಪ್ರತಿ ಗ್ರಾಮ ತಾಲ್ಲೂಕು ಮತ್ತು ಜಿಲ್ಲೆಯಲ್ಲೂ ಪ್ತತಿಧ್ವನಿಸಬೇಕು
ನರೇಂದ್ರ ಮೋದಿ ಪ್ರಧಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.