ADVERTISEMENT

ಚೆನ್ನೈ: ಅಂಗಾಂಗ ಸಾಗಣೆಗೆ ಡ್ರೋನ್ ತಂತ್ರಜ್ಞಾನದ ಮಾದರಿ ಅನಾವರಣ

ಪಿಟಿಐ
Published 3 ಸೆಪ್ಟೆಂಬರ್ 2022, 15:51 IST
Last Updated 3 ಸೆಪ್ಟೆಂಬರ್ 2022, 15:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚೆನ್ನೈ:ಆಸ್ಪತ್ರೆಗಳಲ್ಲಿ ತ್ವರಿತ ಅಂಗಾಂಗ ಕಸಿ ಮಾಡಲು ಮಾನವ ಅಂಗಾಂಗಗಳನ್ನು ಡ್ರೋನ್‌ ಮೂಲಕ ಸಾಗಿಸುವ ದೇಶದ ಮೊದಲ ಮಾದರಿಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಶನಿವಾರ ಇಲ್ಲಿ ಅನಾವರಣಗೊಳಿಸಿದರು.

ಸದ್ಯ ಅಭಿವೃದ್ಧಿಪಡಿಸಲಾಗಿರುವ ಈ ಡ್ರೋನ್‌ನಿಂದ ವಿಮಾನನಿಲ್ದಾಣ ಅಥವಾ ಒಂದು ಸ್ಥಳದಿಂದ 20 ಕಿ.ಮೀ.ದೂರದವರೆಗೆ ಅಂಗಾಂಗ ಹೊಂದಿರುವ ಪೆಟ್ಟಿಗೆಯನ್ನು ಸಾಗಿಸುವುದು ಸಾಧ್ಯವಿದೆ ಎಂದು ಈ ಡ್ರೋನ್‌ ಮಾದರಿ ಅಭಿವೃದ್ಧಿಪಡಿಸಿದಎಂಜಿಎಂ ಹೆಲ್ತ್‌ಕೇರ್‌ನ ನಿರ್ದೇಶಕ ಡಾ.ಪ್ರಶಾಂತ್ ರಾಜಗೋಪಾಲನ್ ಹೇಳಿದ್ದಾರೆ.‌ ನಗರ ಮೂಲದ ಡ್ರೋನ್‌ ಕಂಪನಿಯೊಂದು ಆಸ್ಪತ್ರೆಯೊಂದಿಗೆ ಕೈಜೋಡಿಸಿ ಈ ಯೋಜನೆ ಸಿದ್ಧಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT