ADVERTISEMENT

ಕೇಂದ್ರ ಸಂಪುಟಕ್ಕೆ ಜೆಡಿಯು?: ಊಹಾಪೋಹಗಳ ಮಧ್ಯೆ ದೆಹಲಿಗೆ ನಿತೀಶ್ ಕುಮಾರ್ ಭೇಟಿ

ಪಿಟಿಐ
Published 22 ಜೂನ್ 2021, 13:21 IST
Last Updated 22 ಜೂನ್ 2021, 13:21 IST
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್   

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಂಗಳವಾರ ವೈದ್ಯಕೀಯ ಕಾರಣಗಳಿಂದಾಗಿ ರಾಷ್ಟ್ರ ರಾಜಧಾನಿ ನವದೆಹಲಿಗೆ ತೆರಳಿದ್ದಾರೆ ಎಂಬ ಮಾಹಿತಿ ಇದ್ದರೂ ಕೇಂದ್ರ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ಗಿಟ್ಟಿಸಿಕೊಳ್ಳಲು ತೆರಳಿದ್ದಾರೆ ಎಂಬ ಊಹಾಪೋಹಗಳು ತೀವ್ರವಾಗಿವೆ.

2013-2017ರ ಸಮಯವನ್ನು ಬಿಟ್ಟು ಮೂರು ದಶಕಗಳಿಂದ ಜೆಡಿಯು, ಬಿಜೆಪಿಯ ಮಿತ್ರ ಪಕ್ಷವಾಗಿತ್ತು. ದಿವಂಗತ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸಚಿವ ಸಂಪುಟದಲ್ಲಿ ಸ್ವತಃ ನಿತೀಶ್ ಕುಮಾರ್ ಇದ್ದರು. 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವಿನ ಮೂಲಕ ಅಧಿಕಾರಕ್ಕೆ ಬಂದ ನಂತರ ಎಲ್ಲಾ ಮೈತ್ರಿ ಪಕ್ಷಗಳಿಗೆ ‘ಟೋಕನ್ ಪ್ರಾತಿನಿಧ್ಯ’ ನೀಡುವ ಬಿಜೆಪಿ ಪ್ರಸ್ತಾಪವನ್ನು ನಿತೀಶ್ ಕುಮಾರ್ ತಿರಸ್ಕರಿಸಿದ್ದರು.

‘ಅವರ ದೆಹಲಿ ಪ್ರವಾಸಕ್ಕೂ ಉದ್ದೇಶಿತ ಸಂಪುಟ ಪುನಾರಚನೆ ವಿಷಯಗಳಿಗೆ ಏಕೆ ಸಂಬಂಧ ಕಲ್ಪಿಸಲಾಗುತ್ತಿದೆ ಎಂದು ನನಗೆ ತಿಳಿಯುತ್ತಿಲ್ಲ. ನನಗೆ ತಿಳಿದಿರುವಂತೆ, ಅವರ ಕಣ್ಣಿನ ಸಮಸ್ಯೆಗೆ ಚಿಕಿತ್ಸೆ ಅಗತ್ಯವಿದೆ. ಹೀಗಾಗಿ, ರಾಷ್ಟ್ರ ರಾಜಧಾನಿಗೆ ಭೇಟಿ ನೀಡುತ್ತಿದ್ದಾರೆ.’ ಎಂದು ನಿತೀಶ್ ಕುಮಾರ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಹೇಳಿದ್ದಾರೆ.

ADVERTISEMENT

ಕೇಂದ್ರ ಸಚಿವ ಸಂಪುಟ ಪುನಾರಚನೆಯು ಪ್ರಧಾನಮಂತ್ರಿಯವರಿಗೆ ಬಿಟ್ಟ ವಿಚಾರ. ಈ ವಿಷಯದ ಬಗ್ಗೆ ಯಾರೊಂದಿಗೆ ಸಮಾಲೋಚನೆ ನಡೆಸಬೇಕು ಎಂಬುದನ್ನು ನಿರ್ಧರಿಸುವುದೂ ಅವರೇ ಎಂದು ಸಿಂಗ್ ಹೇಳಿದರು.

‘2017ರಿಂದಲೂ ನನ್ನ ಹೆಸರು ಕೇಳಿಬರುತ್ತಿದೆ. ನಮ್ಮ ಪಕ್ಷದಿಂದ ಕೇಂದ್ರ ಸಚಿವ ಸಂಪುಟದಲ್ಲಿ ಯಾರು ಇರುತ್ತಾರೆ ಎಂಬ ಕುರಿತಾದ ಯಾವುದೇ ನಿರ್ಧಾರವನ್ನು ನಮ್ಮ ನಾಯಕ ತೆಗೆದುಕೊಳ್ಳುತ್ತಾರೆ. ಖಂಡಿತವಾಗಿಯೂ, ಎಲ್ಲರ ಜೊತೆ ಸಮಾಲೋಚನೆ ನಡೆಸಿದ ನಂತರ ಅವರು ನಿರ್ಧಾರ ಕೈಗೊಳ್ಳುತ್ತಾರೆ.’ ಎಂದು ಸಚಿವ ಸ್ಥಾನದ ಆಕಾಂಕ್ಷಿ ಎನ್ನಲಾಗುತ್ತಿರುವ ಜೆಡಿಯು ಪಕ್ಷದ ಮತ್ತೊಬ್ಬ ನಾಯಕ ಆರ್‌ಸಿಪಿ ಸಿಂಗ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.