ADVERTISEMENT

ಡಿಸೆಂಬರ್ ವೇಳೆಗೆ ಯಮುನೆ ಕೊಳಚೆ ನೀರಿನಿಂದ ಮುಕ್ತ

ಗುಣಮಟ್ಟ ಕಾಪಾಡಲು ಈ ಕ್ರಮ

ಪಿಟಿಐ
Published 13 ಮಾರ್ಚ್ 2022, 12:25 IST
Last Updated 13 ಮಾರ್ಚ್ 2022, 12:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಈವರ್ಷದ ಡಿಸೆಂಬರ್ ಅಂತ್ಯದ ವೇಳೆಗೆ ಯಾವುದೇ ಮಲಿನಯುಕ್ತ ನೀರು ಯಮುನಾ ನದಿಗೆ ಹರಿಯದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ವಚ್ಛ ಗಂಗಾ ರಾಷ್ಟ್ರೀಯಮಿಷನ್‌ನ ಮಹಾ ನಿರ್ದೇಶಕ ಜಿ. ಅಶೋಕ್ ಕುಮಾರ್ ಹೇಳಿದ್ದಾರೆ.

ಈ ನಿಟ್ಟಿನಲ್ಲಿ ನದಿಗೆ ಸಂಪರ್ಕ ಕಲ್ಪಿಸುವ ಎಲ್ಲಾ 18 ಮಲಿನಯುಕ್ತ ನೀರಿನ ಚರಂಡಿಗಳನ್ನು ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ (ಎಸ್‌ಟಿಪಿ) ಸಂಪರ್ಕ ಕಲ್ಪಿಸಲಾಗುತ್ತದೆ. ಸಂಸ್ಕರಣೆ ಮಾಡಿದ ನೀರನ್ನು ನದಿಗೆ ಹರಿಸಲಾಗುತ್ತದೆ. ಇದರಿಂದ ನೀರಿನ ಗುಣಮಟ್ಟ ಸುಧಾರಿಸುತ್ತದೆ ಎಂದು ಅವರು ಹೇಳಿದರು.

ರಾಷ್ಟ್ರ ರಾಜಧಾನಿ ದೆಹಲಿಯ ಅರ್ಧದಷ್ಟು ಪ್ರದೇಶಗಳಿಗೆ ನೀರು ಪೂರೈಸುವ 1,300 ಕಿ.ಮೀಗೂ ಹೆಚ್ಚು ಉದ್ದದ ಯಮುನಾ ನದಿಯು ದೇಶದಲ್ಲೇ ಅತ್ಯಂತ ಮಲಿನಯುಕ್ತ ನದಿ ಎಂಬ ಅಪಖ್ಯಾತಿಗೆ ಗುರಿಯಾಗಿದೆ.

ADVERTISEMENT

ನದಿಯ ಒಟ್ಟಾರೆ ಶೇ 2ರಷ್ಟು ಅಂದರೆ 22 ಕಿ.ಮೀ ಮಾತ್ರವೇ ದೆಹಲಿಯಲ್ಲಿ ಹರಿಯುತ್ತದೆ. ಆದರೆ ಶೇ 98ರಷ್ಟು ಪ್ರಮಾಣದ ಮಾಲಿನ್ಯ ದೆಹಲಿಯಿಂದಲೇ ಆಗುತ್ತದೆ ಎಂದು ಹೇಳಲಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ) ಅಂದಾಜಿನ ಪ್ರಕಾರ ದೆಹಲಿಯು ಪ್ರತಿ ದಿನ 3,800 ದಶಲಕ್ಷ ಲೀಟರ್ ಕೊಳಚೆ ನೀರು ನದಿಗೆ ಸೇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.