ADVERTISEMENT

ಮಧ್ಯಪ್ರದೇಶ: ಪಾಶ್ಚಿಮಾತ್ಯ ಉಡುಪು ತೊಟ್ಟ ಭಕ್ತರಿಗೆ ಕಾಳಿಕಾ ದೇವಿ ದರ್ಶನ ನಿಷೇಧ

ಪಿಟಿಐ
Published 29 ಜುಲೈ 2024, 5:18 IST
Last Updated 29 ಜುಲೈ 2024, 5:18 IST
<div class="paragraphs"><p>ಕಾಳಿಕಾ ದೇವಿ (ಸಂಗ್ರಹ ಚಿತ್ರ )</p></div>

ಕಾಳಿಕಾ ದೇವಿ (ಸಂಗ್ರಹ ಚಿತ್ರ )

   

ರತ್ಲಾಂ: ಮಧ್ಯಪ್ರದೇಶದ ರತ್ಲಾಂ ನಗರದ ಕಾಳಿಕಾ ದೇವಿಯ ದರ್ಶನಕ್ಕೆ ಬರುವ ಭಕ್ತಾದಿಗಳು ಪಾಶ್ಚಿಮಾತ್ಯ ಉಡುಪುಗಳನ್ನು ಧರಿಸುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ದೇವಾಲಯದ ಪ್ರವೇಶವನ್ನು ನಿರ್ಬಂಧಿಸಲಾಗುವುದು ಎಂದು ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ.

ದೇವಾಲಯದ ಪಾವಿತ್ರ್ಯತೆಯನ್ನು ಕಾಪಾಡುವ ಸಲುವಾಗಿ ಪಾಶ್ಚಿಮಾತ್ಯ ಉಡುಪುಗಳು ( ಶಾರ್ಟ್ಸ್ ಪ್ಯಾಂಟ್‌ಗಳು, ಮಾಡ್ರನ್‌ ಡ್ರೆಸ್‌ಗಳು) ಧರಿಸಿ ಬರುವ ಭಕ್ತರಿಗೆ ದೇವಾಲಯದ ಪ್ರವೇಶ ನಿಷೇಧವಿರುತ್ತದೆ ಎಂದು ಅರ್ಚಕ ರಾಜೇಂದ್ರ ಶರ್ಮಾ ಹೇಳಿದ್ದಾರೆ.

ADVERTISEMENT

ನಾಲ್ಕು ಶತಮಾನಗಳ ಹಳೆಯದಾದ ಈ ಪುರಾತನ ದೇವಸ್ಥಾನವನ್ನು ರತನ್‌ ರಾಜನು ನಿರ್ಮಿಸಿದರು. ಈ ದೇವಾಲಯದಲ್ಲಿ ಚಾಮುಂಡಿ ಹಾಗೂ ಅನ್ನಪೂಣೇಶ್ವರಿ ದೇವಿ ಕೂಡ ಇದ್ದು, ನವರಾತ್ರಿಯ ಸಮಯದಲ್ಲಿ ಗಾರ್ಭ ಉತ್ಸವವನ್ನು ಆಚರಿಸಲಾಗುತ್ತದೆ ಎಂದು ರಾಜೇಂದ್ರ ಹೇಳಿದ್ದಾರೆ.

ದೇವಸ್ಥಾನ ಆಡಳಿತ ಮಂಡಳಿಯ ನಿರ್ಧಾರವನ್ನು ಸ್ವಾಗತಿಸಿ ಪ್ರತಿಕ್ರಿಯಿಸಿದ ಭಕ್ತರೊಬ್ಬರು, ‘ಪಾಶ್ಚಿಮಾತ್ಯ ಉಡುಗೆಯು ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಸನಾತನ ಧರ್ಮದ ಮೇಲಿನ ದಾಳಿಯಾಗಿದೆ‘ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.