ನವದೆಹಲಿ: ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಮುಂದಿನ ಮೂರು ತಿಂಗಳ ಕಾಲ ಮಾಸಿಕ ‘ಮನ್ ಕೀ ಬಾತ್’ ರೆಡಿಯೊ ಕಾರ್ಯಕ್ರಮದ ಪ್ರಸಾರ ಇರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಿಳಿಸಿದ್ದಾರೆ.
ಕಾರ್ಯಕ್ರಮದ 110ನೇ ಸಂಚಿಕೆಯಲ್ಲಿ ಮಾತನಾಡಿದ್ದ ಅವರು, ಚುನಾವಣಾ ನೀತಿ ಸಂಹಿತೆಯು ಮಾರ್ಚ್‌ನಲ್ಲಿ ಜಾರಿಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು.
‘ಮನ್ ಕೀ ಬಾತ್’ 110 ಸಂಚಿಕೆಗಳಲ್ಲೂ ದೊಡ್ಡ ಯಶಸ್ಸು ಕಂಡಿದೆ. ಪ್ರಸಾರವನ್ನು ದೇಶದ ಸಾಮೂಹಿಕ ಶಕ್ತಿ ಮತ್ತು ಸಾಧನೆಗೆ ಸಮರ್ಪಿಸಲಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
‘ಇದು ಜನರಿಂದ, ಜನರಿಗಾಗಿ ಮಾಡುತ್ತಿರುವ ಜನರ ಕಾರ್ಯಕ್ರಮವಾಗಿದೆ’ ಎಂದು ಮೋದಿ ಹೇಳಿದ್ದಾರೆ.
ನಾವು ಮುಂದಿನ ಬಾರಿ ಭೇಟಿಯಾದಾಗ, ಅದು ‘ಮನ್ ಕೀ ಬಾತ್’ನ 111ನೇ ಸಂಚಿಕೆಯಾಗಿರಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ 2019ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.