ADVERTISEMENT

ರಾಷ್ಟ್ರಪತಿ ಭಾಷಣದಲ್ಲಿ ರಾಮಮಂದಿರದ ಪ್ರಸ್ತಾಪವೇ ಇಲ್ಲ: ಎಸ್‌ಪಿ ಸಂಸದ

ಪಿಟಿಐ
Published 2 ಜುಲೈ 2024, 13:51 IST
Last Updated 2 ಜುಲೈ 2024, 13:51 IST
<div class="paragraphs"><p>ಸಂಸದ ಅವಧೇಶ್ ಪ್ರಸಾದ್‌</p></div>

ಸಂಸದ ಅವಧೇಶ್ ಪ್ರಸಾದ್‌

   

ನವದೆಹಲಿ: ‘ರಾಷ್ಟ್ರಪತಿಯವರ 29 ಪುಟಗಳ ಭಾಷಣದಲ್ಲಿ ರಾಮಮಂದಿರ ಹಾಗೂ ಅಯೋಧ್ಯೆ ಬಗ್ಗೆ ಪ್ರಸ್ತಾಪವೇ ಇಲ್ಲ. ಶ್ರೀರಾಮನ ಜನ್ಮಸ್ಥಳದ ಬಗ್ಗೆ ಪ್ರಸ್ತಾಪಿಸದಿರುವುದು ಕಂಡು ಅಚ್ಚರಿಯಾಯಿತು’ ಎಂದು ಫೈಜಾಬಾದ್‌ ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್‌ ಹೇಳಿದ್ದಾರೆ.

ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ವೇಳೆ ಮಾತನಾಡಿದ ಅವರು, ‘ಅಯೋಧ್ಯೆಯ ಬೀದಿಗಳಲ್ಲಿ ಕೊಳಚೆ ತುಂಬಿದ್ದು, ಅದನ್ನು ದಾಟಿ ರಾಮ ಮಂದಿರಕ್ಕೆ ತಲುಪಬೇಕಾದ ಪರಿಸ್ಥಿತಿಯಿದೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ.

ADVERTISEMENT

‘ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಉದ್ದೇಶದಿಂದ ಬಡವರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. ಆದರೆ ಅವರಿಗೆ ಸಿಗಬೇಕಾದ ಪರಿಹಾರ ಇನ್ನೂ ಸಿಕ್ಕಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.