ADVERTISEMENT

'ಮನದ ಮಾತು' ಹೇಳಲು ಮೇ ತಿಂಗಳಲ್ಲಿ ಮತ್ತೆ ಬರುವೆ ಎಂದ ಮೋದಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2019, 8:51 IST
Last Updated 24 ಫೆಬ್ರುವರಿ 2019, 8:51 IST
 ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಮನ್ ಕೀ ಬಾತ್ ಕಾರ್ಯಕ್ರಮ ಪ್ರಸಾರವಾಗುವುದಿಲ್ಲ,ಇದು ಕೊನೆಯ ಕಾರ್ಯಕ್ರಮ. ಲೋಕಸಭಾ ಚುನಾವಣೆ ಮುಗಿದ ನಂತರ ಮೇ ತಿಂಗಳಲ್ಲಿಮತ್ತೆ ಮನದ ಮಾತು ಹೇಳಲು ಬರುವೆ ಎಂದಿದ್ದಾರೆ ಪ್ರದಾನಿ ನರೇಂದ್ರ ಮೋದಿ.
ಲೋಕಸಭಾ ಚುನಾವಣೆ ಇರುವ ಕಾರಣ ಮಾರ್ಚ್ ಮತ್ತು ಏಪ್ರಿಲ್‍ನಲ್ಲಿ ಮನ್ ಕೀ ಬಾತ್ ಇರುವುದಿಲ್ಲ.ಮೇ ತಿಂಗಳ ಕೊನೆಯ ಭಾನುವಾರ ಮನ್ ಕೀ ಬಾತ್ ಪ್ರಸಾರವಾಗಲಿದೆ ಎಂದು ಹೇಳುವ ಮೂಲಕ ಮೋದಿ ಮತ್ತೊಮ್ಮೆ ಅಧಿಕಾರಕ್ಕೇರುವ ಆಶಾವಾದ ವ್ಯಕ್ತ ಪಡಿಸಿದ್ದಾರೆ.

ಇಂದು ಮನದ ಮಾತು ರೇಡಿಯೊ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಪುಲ್ವಾಮ ದಾಳಿಯಲ್ಲಿ ಮಡಿದ ಸಿಆರ್‌ಪಿಎಫ್ಯೋಧರಿಗೆ ಗೌರವ ಸಲ್ಲಿಸಿದ್ದು, ಅವರ ಶೌರ್ಯವನ್ನು ಕೊಂಡಾಡಿದ್ದಾರೆ.

ಮನದ ಮಾತು 53ನೇ ಸಂಚಿಕೆಯಲ್ಲಿ ಮಾತನಾಡಿದ ಮೋದಿ,40 ಯೋಧರನ್ನು ಬಲಿತೆಗೆದುಕೊಂಡ ಪುಲ್ವಾಮ ದಾಳಿ ಬಗ್ಗೆ ಜನರಲ್ಲಿ ರೋಷವಿದೆ.ನಮ್ಮ ಸಶಸ್ತ್ರ ಪಡೆ ಶಾಂತಿ ಪುನಸ್ಥಾಪಿಸಿದ್ದು, ಉಗ್ರರಿಗೆ ತಕ್ಕ ಉತ್ತರ ನೀಡಿದ್ದಾರೆ.

ADVERTISEMENT

ಇಂಡಿಯಾ ಗೇಟ್ ಬಳಿ ಯುದ್ಧ ಸ್ಮಾರಕ ನಿರ್ಮಿಸಿದ್ದು ಫೆಬ್ರುವರಿ 25ರಂದು ಅದರ ಉದ್ಘಾಟನೆನಡೆಯಲಿದೆ.ಭಾರತದಲ್ಲಿ ಯುದ್ಧಸ್ಮಾರಕವಿಲ್ಲ ಎಂಬುದು ನನಗೆ ಅಚ್ಚರಿ ಮತ್ತು ನೋವುಂಟು ಮಾಡಿದೆ. ಇಂಡಿಯಾ ಗೇಟ್ ಮತ್ತುಅಮರ್ ಜವಾನ್ ಜ್ಯೋತಿ ಬಳಿ ಹೊಸ ಯುದ್ದ ಸ್ಮಾರಕ ನಿರ್ಮಿಸಲಾಗಿದೆ. ದೇಶಕ್ಕೆ ಸ್ವಾತಂತ್ರ ಸಿಕ್ಕಿದ ಮೇಲೆ ಹುತಾತ್ಮರಾದ ಯೋಧರನ್ನು ಗೌರವಿಸಲು ಈ ಸ್ಮಾರಕ ನಿರ್ಮಿಸಲಾಗಿದೆ.

ನ್ಯಾಷನಲ್ ವಾರ್ ಮೆಮೊರಿಯಲ್ ಮತ್ತು ನ್ಯಾಷನಲ್ ವಾರ್ ಮ್ಯೂಸಿಯಂನ್ನು ಇಂಡಿಯಾ ಗೇಟ್ ಬಳಿ ನಿರ್ಮಿಸುವ ಯೋಜನೆಗೆ ಸರ್ಕಾರ 2015ರಲ್ಲಿ ಅನಮತಿ ನೀಡಿತ್ತು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ 22,500 ಯೋಧರು ಹುತಾತ್ಮರಾಗಿದ್ದಾರೆ.
ಸರ್ಕಾರದ ಯೋಜನೆಗಳ ಬಗ್ಗೆ ಸಾಮಾನ್ಯ ಜನರಿಗೆ ತಿಳಿಸುವುದಕ್ಕಾಗಿ ನಾನು ಈ ರೇಡಿಯೊ ಕಾರ್ಯಕ್ರಮವನ್ನು ಆರಂಭಿಸಿದ್ದೆ.ದೇಶದ ಅಭಿವೃದ್ಧಿಗಾಗಿ ಜನರ ಸಹಕಾರವೂ ಬೇಕಿದೆ ಎಂದಿದ್ದಾರೆ ಮೋದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.