ಮುಂಬೈ: ಮುಂಬೈ ಮೆಟ್ರೊ ರೈಲು ನಿಗಮದ (ಎಂಎಂಆರ್‌ಸಿಎಲ್) ಉದ್ದೇಶಿತ ಮೆಟ್ರೊ–3ನೇ ಹಂತದ ಕಾರ್ ಶೆಡ್ ನಿರ್ಮಾಣ ಕಾಮಗಾರಿಗೆ ಬಲಿಯಾಗುತ್ತಿದ್ದ ಆರೆ ಕಾಲೊನಿ ಮರಗಳ ಹನನಕ್ಕೆ ಸುಪ್ರೀಂಕೋರ್ಟ್ ತಡೆನೀಡಿದೆ.
ಮುಂದಿನ ವಿಚಾರಣೆ ಅ.21ಕ್ಕೆ ನಡೆಯಲಿದ್ದು, ಅಲ್ಲಿಯವರೆಗೆ ಮರಗಳನ್ನು ಕಡಿಯುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಕಾಮಗಾರಿಗೆ ಅವಶ್ಯಕತೆ ಇರುವಷ್ಟು ಮಾತ್ರ ಮರಗಳನ್ನು ಕತ್ತರಿಸಬೇಕು. ಅದರ ಹೊರತಾಗಿ ಮರಗಳನ್ನು ಕಡಿಯುವಂತಿಲ್ಲ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಹೇಳಿದೆ.
2,656 ಮರಗಳ ಕಡಿಯುವಿಕೆಯನ್ನು ವಿರೋಧಿಸಿದ ಪ್ರತಿಭಟನಾಕಾರರನ್ನು ಬಿಡುಗಡೆಗೊಳಿಸುವಂತೆಯೂ ಸೂಚಿಸಿದೆ.
ಇದನ್ನೂ ಓದಿ: ಆರೆ ಕಾಲೊನಿ ; ಮರಗಳ ಹನನ 29 ಮಂದಿಯ ಬಂಧನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.