ADVERTISEMENT

ಮಲ ಹೊರುವ ಪದ್ಧತಿ ವರದಿಯಾಗಿಲ್ಲ: ರಾಮದಾಸ್ ಅಠಾವಳೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 15:41 IST
Last Updated 24 ಜುಲೈ 2024, 15:41 IST
<div class="paragraphs"><p>ರಾಮದಾಸ್ ಅಠಾವಳೆ</p></div>

ರಾಮದಾಸ್ ಅಠಾವಳೆ

   

ನವದೆಹಲಿ: ದೇಶದಲ್ಲಿ ಕಳೆದ ಐದು ವರ್ಷಗಳಿಂದ ಮಲ ಹೊರುವ ಪದ್ಧತಿ ಅನುಸರಿಸಿರುವ ಬಗ್ಗೆ ವರದಿಯಾಗಿಲ್ಲ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಮಂಗಳವಾರ ತಿಳಿಸಿದೆ. 

ಈ ಸಂಬಂಧ ಕೇಳಲಾದ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್ ಅಠವಾಳೆ, ‘ತಮ್ಮ ಜಿಲ್ಲೆಗಳು ಮಲ ಹೊರುವ ಪದ್ಧತಿಯಿಂದ ಮುಕ್ತವಾಗಿದೆಯೇ ಅಥವಾ ನೈರ್ಮಲ್ಯರಹಿತ ಶೌಚಾಲಯಗಳನ್ನು ಮಲ ಹೊರುವವರು ಸ್ವಚ್ಛಗೊಳಿಸುತ್ತಿದ್ದಾರೆಯೇ ಎಂಬುದರ ದತ್ತಾಂಶಗಳನ್ನು ‘ಸ್ವಚ್ಛ ಅಭಿಯಾನ’ದ ಮೊಬೈಲ್ ಆ್ಯಪ್‌ನಲ್ಲಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಆದರೆ, ನಂಬಲಾರ್ಹವಾದ ದತ್ತಾಂಶಗಳು ಈವರೆಗೆ ಸಲ್ಲಿಕೆಯಾಗಿಲ್ಲ’ ಎಂದು ಲಿಖಿತ ಉತ್ತರ ನೀಡಿದ್ದಾರೆ.

ADVERTISEMENT

’114 ಜಿಲ್ಲೆಗಳಿಂದ 6,256 ಪ್ರಕರಣಗಳನ್ನು ಮೊಬೈಲ್‌ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಈ ಎಲ್ಲ ಪ್ರಕರಣಗಳನ್ನು ಪರಿಶೀಲಿಸಲಾಗಿದ್ದು, ಒಂದೇ ಒಂದು ಪ್ರಕರಣವು ಸತ್ಯ ಎಂಬುದಾಗಿ ದೃಢಪಟ್ಟಿಲ್ಲ‘ ಎಂದು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.