ADVERTISEMENT

ಊಹಾತ್ಮಕ ವರದಿ ಬೇಡ: ಮಾಧ್ಯಮಗಳಿಗೆ ಕಾಂಗ್ರೆಸ್ ಮನವಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 15:33 IST
Last Updated 10 ಅಕ್ಟೋಬರ್ 2024, 15:33 IST
   

ನವದೆಹಲಿ: ‘ಪಕ್ಷದಿಂದ ಅಧಿಕೃತವಾಗಿ ತಿಳಿಸುವ ಮಾಹಿತಿ ಹೊರತುಪಡಿಸಿ, ವದಂತಿಗಳಿಗೆ ಆಸ್ಪದವಾಗುವ ಊಹಾತ್ಮಕ ಮಾಹಿತಿಗಳಿಂದ ದೂರ ಇರಬೇಕು’ ಎಂದು ಕಾಂಗ್ರೆಸ್ ಪಕ್ಷ ಮಾಧ್ಯಮಗಳಿಗೆ ಮನವಿ ಮಾಡಿದೆ.

ಕಾಂಗ್ರೆಸ್ ಪಕ್ಷದ ಉನ್ನತ ಮುಖಂಡರ ಸಭೆ ಕುರಿತ ವರದಿ ಕುರಿತಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯು ಈ ಹೇಳಿಕೆಯನ್ನು ನೀಡಿದೆ.

ಅನೇಕ ಆಧಾರವಿಲ್ಲದ ಮೂಲಗಳನ್ನು ಆಧರಿಸಿ ಸುದ್ದಿಗಳು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿವೆ ಎಂದು ಹೇಳಿಕೆಯಲ್ಲಿ ಪಕ್ಷ ಅಭಿಪ್ರಾಯಪಟ್ಟಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.