ಮುಂಬೈ(ಪಿಟಿಐ): 'ಸಂಸದೆ ನವನೀತ್ ಕೌರ್ ಮತ್ತು ಅವರ ಪತಿ ರವಿ ರಾಣಾ ಅವರು ವಾಕ್ ಸ್ವಾತಂತ್ರ್ಯದ ಗೆರೆಯನ್ನು ದಾಟಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಅವಹೇಳನಕಾರಿ ಮತ್ತು ಆಕ್ಷೇಪಾರ್ಹ ಹೇಳಿಕೆಗಳ ಆಧಾರದ ಮೇಲೆಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲು ಆಗುವುದಿಲ್ಲ' ಎಂದು ದಂಪತಿಗೆ ಜಾಮೀನು ನೀಡಿದ ಸಂದರ್ಭದಲ್ಲಿ ವಿಶೇಷ ನ್ಯಾಯಾಲಯ ಹೇಳಿದೆ.
ದೇಶದ್ರೋಹದ ಪ್ರಕರಣದಲ್ಲಿ ಒಂದು ವಾರಕ್ಕಿಂತ ಹೆಚ್ಚು ಕಾಲ ಸೆರೆವಾಸದಲ್ಲಿದ್ದ ನವನೀತ್ ಕೌರ್ ಮತ್ತು ಅವರ ಪತಿ ರವಿ ರಾಣಾ ಅವರಿಗೆ ಬುಧವಾರ ಜಾಮೀನು ದೊರಕಿತ್ತು. ಈ ಜಾಮೀನಿನ ಆದೇಶದ ಸಾರಾಂಶವು ಶುಕ್ರವಾರ ಬಿಡುಗಡೆಯಾಗಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸದ ಎದುರು ಹನುಮಾನ್ ಚಾಲಿಸಾ ಪಠಣ ಮಾಡುವುದಾಗಿ ಹೇಳಿದ್ದ ದಂಪತಿ ಘೋಷಣೆಯು, ಹಿಂಸಾಚಾರ ಮೂಲಕ ಸರ್ಕಾರವನ್ನು ಪತನಗೊಳಿಸುವ ಉದ್ದೇಶದ್ದಾಗಿರಲಿಲ್ಲ. ಆದಾಗ್ಯೂ, ಅವರ ಹೇಳಿಕೆಗಳು ಆಕ್ಷೇಪಾರ್ಹವಾದವು. ಅಷ್ಟಕ್ಕೇ ಅವರನ್ನು ದೇಶದ್ರೋಹದ ಪ್ರಕರಣದ ವ್ಯಾಪ್ತಿಗೆ ತರಲು ಆಗದು ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಆರ್.ಎನ್. ರೊಕಾಡೆ ಅವರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.