ಮುಂಬೈ: ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪಟ್ಟವೇರಲು ಸಕಲ ಸಿದ್ಧತೆ ನಡೆಯುತ್ತಿರುವಂತೆಯೇ, ಶಿವಸೇನಾವುದೆಹಲಿ ಗದ್ದುಗೆಯನ್ನೇರಿದರೂಅಚ್ಚರಿ ಪಡಬೇಡಿ ಎಂದು ಪಕ್ಷದ ವಕ್ತಾರ ಸಂಜಯ್ ರಾವುತ್ ಬುಧವಾರ ಹೇಳಿದ್ದಾರೆ.
ಇದನ್ನೂ ಓದಿ:ಮತ್ತೆ ಬಂದೆ ಅನ್ನೋಕೆ ನಾನೆಲ್ಲಿ ಪಕ್ಷ ಬಿಟ್ಟಿದ್ದೆ: ಅಜಿತ್ ಪವಾರ್ ಪ್ರಶ್ನೆ
"ಮೊದಲ ದಿನದಿಂದಲೇ ನಾವೇ ಸರಕಾರ ರಚಿಸುತ್ತೇವೆ ಅಂತ ನಾನು ಹೇಳುತ್ತಲೇ ಬಂದಿದ್ದೆ. ನಮ್ಮ 'ಸೂರ್ಯಯಾನ'ವು ಮಹಾರಾಷ್ಟ್ರದ ಮಂತ್ರಾಲಯದ 6ನೇ ಮಹಡಿಯಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗುತ್ತದೆ ಎಂದಿದ್ದೆ ನಾನು. ಅಂದು ಎಲ್ಲರೂ ನಗುತ್ತಿದ್ದರು. ಆದರೆ ನಮ್ಮ ಸೂರ್ಯಯಾನದ ಸೇಫ್ ಲ್ಯಾಂಡಿಂಗ್ ಆಗಿಬಿಟ್ಟಿದೆ" ಎಂದು ರಾವುತ್ ಹೇಳಿದ್ದಾರೆ.
ಇದನ್ನೂ ಓದಿ:ಮಹಾರಾಷ್ಟ್ರ ರಾಜಕಾರಣ | ಸೂಕ್ತ ಸಂದರ್ಭದಲ್ಲಿ ಎಲ್ಲನ್ನೂ ಬಹಿರಂಗಪಡಿಸುವೆ ಎಂದ ಫಡಣವೀಸ್ Live
ಮುಂದಿನ ದಿನಗಳಲ್ಲಿ ಈ ಸೂರ್ಯಯಾನವು ದೆಹಲಿಯಲ್ಲಿ ಲ್ಯಾಂಡ್ ಆದರೂ ಅಚ್ಚರಿಪಡಬೇಕಿಲ್ಲ ಎಂದು ರಾವುತ್ ಹೇಳಿದ್ದಾರೆ. ಸೂರ್ಯಯಾನ ಎಂದು ಅವರು ಸಂಬೋಧಿಸಿರುವುದು ಶಿವಸೇನಾದ ನಾಯಕನೊಬ್ಬನನ್ನು.
ಇದನ್ನೂ ಓದಿ:ಮಹಾರಾಷ್ಟ್ರ | ಅಜಿತ್ ಪವಾರ್, ದೇವೇಂದ್ರ ಫಡಣವೀಸ್ ರಾಜೀನಾಮೆ ಹಿಂದಿದ್ದ ಲೆಕ್ಕಾಚಾರ
ಬಿಜೆಪಿ ಜತೆ ಸೇರಿಕೊಂಡು, ಉಪಮುಖ್ಯಮಂತ್ರಿಯಾಗಿ ಮೂರು ದಿನಗಳ ಬಳಿಕ ರಾಜೀನಾಮೆ ನೀಡಿದ ಶಿವಸೇನಾ ಮುಖಂಡ ಅಜಿತ್ ಪವಾರ್ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅವರು, "ಅಜಿತ್ ವಾಪಸ್ ಬಂದೇ ಬರುತ್ತಾರೆ ಅಂತ ನಾನು ಹೇಳಿದ್ದೆ. ಅಷ್ಟೇ ಅಲ್ಲ, ಅಜಿತ್ ಪವಾರ್‌ರನ್ನು ಅರ್ಥ ಮಾಡಿಕೊಳ್ಳಲು 100 ವರ್ಷಗಳೇ ಬೇಕಾಗಬಹುದು ಎಂದೂ ಹೇಳಿದ್ದೆ" ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಇದನ್ನೂ ಓದಿ:ಬಿಜೆಪಿ ಬೆಂಬಲಿಸಲು ಮುಂದಾಗಿದ್ದ ಶಾಸಕರನ್ನು ‘ಹಾರಿಸಿಕೊಂಡು’ ಬಂದ ಎನ್‌ಸಿಪಿ!
ದೇವೇಂದ್ರ ಫಡಣವೀಸ್ ಹಾಗೂ ಅಜಿತ್ ಪವಾರ್ ಮಂಗಳವಾರದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ರಾಜೀನಾಮೆ ನೀಡುವ ಮೂಲಕ, ಶಿವಸೇನಾ-ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟವು ಅಧಿಕಾರಕ್ಕೇರಲು ಅನುವುಮಾಡಿಕೊಟ್ಟಿದ್ದರು. ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.