ನವದೆಹಲಿ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವೇ ಇರಲಿ, 10 -15 ವರ್ಷಗಳು ಕಳೆದ ನಂತರವೂ ಆ ಘಟನೆ ಬಗ್ಗೆ ದೂರು ನೀಡಲು ಅವಕಾಶ ನೀಡಬೇಕು.ಲೈಂಗಿಕ ಕಿರುಕುಳ ಬಗ್ಗೆ ದೂರು ನೀಡಲು ಸಮಯ ಪರಧಿ ಬೇಕಾಗಿಲ್ಲ. ಇಂತಿಷ್ಟೇ ಸಮಯದಲ್ಲಿ ದೂರು ನೀಡಬೇಕು ಎಂದು ದೂರು ನೀಡಲುಸಮಯ ಪರಿಧಿಯನ್ನು ಹೇರಬೇಡಿ ಎಂದು ತಾನು ಕಾನೂನು ಸಚಿವಾಲಯಕ್ಕೆ ಮನವಿ ಮಾಡಿರುವುದಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಮನೇಕಾ ಗಾಂಧಿ ಹೇಳಿದ್ದಾರೆ.
ಚುಡಾಯಿಸುವುದು ಮತ್ತು ಲೈಂಗಿಕ ದೌರ್ಜನ್ಯಕ್ಕೊಳಾದ ನೋವು ವರ್ಷಗಳು ಕಳೆದರೂ ಮಾಸುವುದಿಲ್ಲ. ಭಾರತದಲ್ಲಿಯೂ ಮಿಟೂ ಚಳುವಳಿ ಆರಂಭವಾಗಿದ್ದಕ್ಕೆಖುಷಿಯಾಗಿದೆ.ಲೈಂಗಿಕ ದೌರ್ಜನ್ಯದ ವಿರುದ್ಧ ಮೌನ ಮುರಿಯಲು ಈ ಚಳವಳಿ ಸಹಕಾರಿಯಾಗಲಿದೆ ಎಂದಿದ್ದಾರೆ ಸಚಿವೆ.
ಲೈಂಗಿಕ ದೌರ್ಜನ್ಯಕ್ಕೊಳಗಾದವರು ಆ ಘಟನೆಯನ್ನು ನೆನಪಿಟ್ಟುಕೊಳ್ಳುತ್ತಾರೆ.ಈ ಘಟನೆ ಬಗ್ಗೆ ದೂರು ನೀಡುವುದಕ್ಕೆ ಯಾವುದೇ ಸಮಯ ಪರಿಧಿ ಬೇಡ ಎಂದು ನಾವು ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿದ್ದೇವೆ ಎಂದುಮನೇಕಾ ಗಾಂಧಿ ಹೇಳಿದ್ದಾರೆ.
ಸಿಆರ್‍ಪಿಸಿ 468 ಸೆಕ್ಷನ್ ಅಡಿಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಸೇರಿದಂತೆ ಎಲ್ಲ ರೀತಿಯ ಲೈಂಗಿಕ ಕಿರುಕುಳ ಅಪರಾಧವನ್ನು ಮೂರು ವರ್ಷಗಳೊಳಗೆ ದೂರು ನೀಡಿದರೆ ಅಪರಾಧಿಗೆ ಮೂರು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.