ನವದೆಹಲಿ: ಭಾರತದ ಆರ್ಥಿಕ ತಜ್ಞ, ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ (89) ಅವರು ನಿಧನರಾಗಿದ್ದಾರೆಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಸುದ್ದಿ ನಿಜವಲ್ಲ.
ಸಾವಿನ ಕುರಿತಾಗಿ ಹರಡಿದ ಸುದ್ದಿಯನ್ನು ಅಮರ್ತ್ಯರ ಪುತ್ರಿ, ನಟಿ ನಂದನಾ ದೇವ್ ಸೇನ್ ಅವರು ನಿರಾಕರಿಸಿದ್ದು, ಈ ಕುರಿತು ಪಿಟಿಐ ಸುದ್ದಿ ಸಂಸ್ಥೆಯೂ ಸ್ಪಷ್ಟನೆ ನೀಡಿದೆ.
ಪುತ್ರಿ ನಂದನಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಕುರಿತು ಚಿತ್ರ ಸಹಿತವಾಗಿ ಸ್ಪಷ್ಟನೆ ನೀಡಿದ್ದಾರೆ.
ಸ್ನೇಹಿತರೇ, ನೀವು ತೋರಿದ ಕಾಳಜಿಗಾಗಿ ಧನ್ಯವಾದಗಳು. ಆದರೆ ಅದೊಂದು ಫೇಕ್ ಸುದ್ದಿ. ತಂದೆಯವರು ಕ್ಷೇಮವಾಗಿದ್ದಾರೆ. ಕೇಂಬ್ರಿಜ್‌ನಲ್ಲಿ ನಾವು ಈಗಷ್ಟೇ ಕುಟುಂಬಿಕರು ಅತ್ಯುತ್ತಮ ವಾರವನ್ನು ಕಳೆದಿದ್ದೇವೆ. ನಿನ್ನೆ ನಾವು ಅವರಿಗೆ 'ಬೈ' ಹೇಳಿದಾಗ ಎಂದಿನಷ್ಟೇ ಬಲವಾದ ಅಪ್ಪುಗೆ ಸಿಕ್ಕಿತ್ತು. ಅವರು ಹಾರ್ವರ್ಡ್‌ನಲ್ಲಿ ವಾರಕ್ಕೆರಡು ಕೋರ್ಸುಗಳನ್ನು ಬೋಧಿಸುತ್ತಿದ್ದಾರೆ ಎಂದು ನಂದನಾ ಅವರು ವಿವರಣೆ ನೀಡಿದ್ದಾರೆ.
ಈ ವರ್ಷದ ಅರ್ಥಶಾಸ್ತ್ರ ನೊಬೆಲ್ ಪಡೆದಿರುವ ಕ್ಲಾಡಿಯಾ ಗೋಲ್ಡಿನ್ ಹೆಸರಿನಲ್ಲಿ ಎಕ್ಸ್ ಖಾತೆಯಲ್ಲಿ ಈ ಸುದ್ದಿ ಹಂಚಿಕೊಳ್ಳಲಾಗಿತ್ತು.
ಅಮರ್ತ್ಯ ಸೇನ್ ಅವರು ಅರ್ಥಶಾಸ್ತ್ರಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ 1998ರಲ್ಲಿ ನೊಬೆಲ್ ಪ್ರಶಸ್ತಿ ಲಭಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.