ADVERTISEMENT

ED ಅಧಿಕಾರಿಗಳ ಹೆಸರಿನಲ್ಲಿ ಬೆದರಿಕೆ: ₹34 ಲಕ್ಷ ಕಳೆದುಕೊಂಡ ನೋಯ್ಡಾದ ಮಹಿಳೆ

ಪಿಟಿಐ
Published 25 ನವೆಂಬರ್ 2024, 2:26 IST
Last Updated 25 ನವೆಂಬರ್ 2024, 2:26 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

ನೋಯ್ಡಾ: ಜಾರಿ ನಿರ್ದೇಶನಾಲಯದ ಹೆಸರಿನಲ್ಲಿ ನಕಲಿ ನೋಟಿಸ್‌ ನೀಡಿ, ಬಂಧಿಸುವುದಾಗಿ ಬೆದರಿಸಿ ಮಹಿಳೆಯೊಬ್ಬರಿಂದ ಬರೋಬ್ಬರಿ ₹34 ಲಕ್ಷವನ್ನು ಸೈಬರ್‌ ವಂಚಕರು ದೋಚಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂತ್ರೆಸ್ತೆಯನ್ನು ಸೆಕ್ಟರ್-41ರ ನಿವಾಸಿ ನಿಧಿ ಪಲಿವಾಲ್ ಎಂದು ಗುರುತಿಸಲಾಗಿದೆ.

ADVERTISEMENT

ಸಂತ್ರಸ್ತೆಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ, ನಕಲಿ ಇ.ಡಿ ನೋಟಿಸ್‌ ಅನ್ನು ವಾಟ್ಸಾಪ್‌ ಮೂಲಕ ಕಳುಹಿಸಲಾಗಿದೆ ಎಂದೂ ಪೊಲೀಸರು ಹೇಳಿದ್ದಾರೆ.

ಆಕೆಯ ಹೆಸರಿನಲ್ಲಿ 5 ಪಾಸ್‌ಪೋರ್ಟ್‌ಗಳು, 2 ಡೆಬಿಟ್ ಕಾರ್ಡ್‌ಗಳು, 2 ಲ್ಯಾಪ್‌ಟಾಪ್‌ಗಳು, ಸುಮಾರು ₹ 75,937 ಹಣವನ್ನು ಮತ್ತು 200 ಗ್ರಾಂ ಮಾದಕ ದ್ರವ್ಯಗಳನ್ನು ಒಳಗೊಂಡ ಪಾರ್ಸೆಲ್ ಅನ್ನು ಮುಂಬೈನಿಂದ ಇರಾನ್‌ಗೆ ಕಳುಹಿಸಲಾಗುತ್ತಿದೆ ಎಂದು ಆರೋಪಿಯೊಬ್ಬ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸಂತಸ್ತೆಯು ಆಗಸ್ಟ್‌ನಲ್ಲಿ ಅಪರಿಚಿತರಿಂದ ಕರೆ ಸ್ವೀಕರಿಸಿಲಾಗಿತ್ತು ಎಂದು ದೂರಿನಲ್ಲಿ ದಾಖಲಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.