ADVERTISEMENT

ಈಶಾನ್ಯ ರಾಜ್ಯಗಳು: 592 ಭೂಕುಸಿತಗಳು | ಅಸ್ಸಾಂ ಪ್ರವಾಹ: 880 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 23:40 IST
Last Updated 31 ಜುಲೈ 2024, 23:40 IST
<div class="paragraphs"><p>ಭೂಕುಸಿತ: ರಕ್ಷಣಾ ಕಾರ್ಯಾಚರಣೆ</p></div>

ಭೂಕುಸಿತ: ರಕ್ಷಣಾ ಕಾರ್ಯಾಚರಣೆ

   

(ಪಿಟಿಐ ಚಿತ್ರ)

ಅಸ್ಸಾಂ ಪ್ರವಾಹ: 880 ಮಂದಿ ಸಾವು

ADVERTISEMENT

‘ಕಳೆದ ಐದು ವರ್ಷಗಳಲ್ಲಿ ಅಸ್ಸಾಂನಲ್ಲಿ ಉಂಟಾದ ಪ್ರವಾಹದಲ್ಲಿ ಒಟ್ಟು 880 ಮಂದಿ ಮೃತಪಟ್ಟಿದ್ದಾರೆ’ ಎಂದು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಬುಧವಾರ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

ವರ್ಷ;ಅಸ್ಸಾಂ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ

2019;157

2020;190

2021;73

2022;278

2023;65

2024 (ಜುಲೈವರೆಗೆ);117

ಒಟ್ಟು;880

ಈಶಾನ್ಯ ರಾಜ್ಯಗಳು: 592 ಭೂಕುಸಿತಗಳು

‘ಈಶಾನ್ಯ ರಾಜ್ಯಗಳಲ್ಲಿ ಕಳೆದ ಏಳು ವರ್ಷಗಳಲ್ಲಿ ಸಂಭವಿಸಿದ ಭೂಕುಸಿತಗಳ ಸಂಖ್ಯೆಯನ್ನು ಗಮನಿಸಿದರೆ, ಈ ವರ್ಷದ ಏಪ್ರಿಲ್‌–ಜುಲೈ ತಿಂಗಳಲ್ಲೇ ಹೆಚ್ಚಿನ ಭೂಕುಸಿತ ಸಂಭವಿಸಿದೆ. ಕಳೆದ ಏಳು ವರ್ಷಗಳಲ್ಲಿ 396 ಭೂಕುಸಿತ ಸಂಭವಿಸಿದ್ದರೆ, ಈ ವರ್ಷದಲ್ಲಿಯೇ 196 ಇಂಥ ಘಟನೆಗಳು ಸಂಭವಿಸವೆ’ ಎಂದು ಭೂ ವಿಜ್ಞಾನ ಸಚಿವ ಜಿತೆಂದ್ರ ಸಿಂಗ್‌ ಲೋಕಸಭೆಗೆ ಬುಧವಾರ ಮಾಹಿತಿ ನೀಡಿದರು.

‘ಜಿಯೋಲಾಜಿಕಲ್‌ ಸರ್ವೇ ಆಫ್‌ ಇಂಡಿಯಾ’ವು ಈ ಸಮೀಕ್ಷೆ ನಡೆಸಿದೆ. ಯಾಕಾಗಿ ಇಂಥ ಘಟನೆಗಳು ಹೆಚ್ಚು ಹೆಚ್ಚು ಸಂಭವಿಸುತ್ತಿವೆ, ಇದರ ಗುಣಲಕ್ಷಣಗಳೇನು ಎನ್ನುವುದನ್ನು ತಿಳಿದುಕೊಳ್ಳಲು ಸುಮಾರು 20 ವರ್ಷಗಳ ದತ್ತಾಂಶಗಳನ್ನು ಅಧ್ಯಯನಕ್ಕೆ ಒಳಪಡಿಸಬೇಕಿದೆ’ ಎಂದು ಸಚಿವರು ಹೇಳಿದರು.

(ವರ್ಷ;ಈಶಾನ್ಯ ರಾಜ್ಯಗಳಲ್ಲಿ‌ ಸಂಭವಿಸಿದ ಭೂಕುಸಿತಗಳ ಸಂಖ್ಯೆ)

2017-18;28

2018-19;49

2019-20;45

2020-21;65

2021-22;78

2022-23;102

2023-24;29

2024-25 (ಏಪ್ರಿಲ್‌–ಜುಲೈ ಅವಧಿ);196

ಒಟ್ಟು;592

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.