ನವದೆಹಲಿ: ಹಿಂದೂ ಮಹಾಸಾಗರಪ್ರದೇಶದಲ್ಲಿ ಚೀನಾ ಅತಿಕ್ರಮಣ ನಡೆಸುವ ಮೂಲಕ ಇಲ್ಲಿನ ಸಂಪನ್ಮೂಲವನ್ನು ಕೊಳ್ಳೆ ಹೊಡೆಯಲು ಹವಣಿಸುತ್ತಿರುವುದರಲ್ಲಿ ಆಶ್ಚರ್ಯ ಪಡುವಂಥದ್ದು ಏನೂ ಇಲ್ಲ ಎಂದು ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಬುಧವಾರ ಹೇಳಿದರು.
ಚೀನಾ ಹೊಂದಲು ಬಯಸುತ್ತಿರುವ ಇಂಧನ ಮೂಲ, ಮಾರುಕಟ್ಟೆ ಹಾಗೂ ಇತರ ಸಂಪನ್ಮೂಲಗಳು ಹಿಂದೂಮಹಾಸಾಗರ ಪ್ರದೇಶದಲ್ಲಿಯೇ ಇರುವುದು ಇದಕ್ಕೆ ಕಾರಣ ಎಂದರು.
‘ರೈಸಿನಾ ಡೈಲಾಗ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಚೀನಾದ ಇಂಥ ಪ್ರಯತ್ನವನ್ನು ಪ್ರತಿರೋಧಿಸಿ, ದೇಶದ ಭದ್ರತೆ ಹಾಗೂ ಆ ಪ್ರದೇಶದಲ್ಲಿ ಸ್ಥಿರತೆ ಕಾಪಾಡಲು ನೌಕಾಪಡೆ ಶಕ್ತವಾಗಿದೆ. ಜಾಗತಿಕ ಸನ್ನಿವೇಶದಲ್ಲಿ ಹೆಚ್ಚು ಆತ್ಮವಿಶ್ವಾಸ ಹೊಂದಿರುವ ರಾಷ್ಟ್ರವಾಗಿ ಭಾರತ ಹೊರಹೊಮ್ಮುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.