ನವದೆಹಲಿ: ಹಿಮಾಲಯ ಶಿಖರಗಳಲ್ಲಿ ಕಾಲ್ಪನಿಕ ಪ್ರಾಣಿ ‘ಯೇತಿ’ಯ ಹೆಜ್ಜೆಗುರುತುಗಳನ್ನು ಪತ್ತೆ ಹಚ್ಚಿರುವುದಾಗಿ ಭಾರತೀಯ ಸೇನೆಗೆ ಸಂಬಂಧಿಸಿದ ಪರ್ವತಾರೋಹಣ ತಂಡವೊಂದು ಹೇಳಿಕೊಂಡಿತ್ತು. ಹೆಜ್ಜೆ ಗುರುತಿನ ಚಿತ್ರಗಳನ್ನು ಭಾರತೀಯ ಸೇನೆ, ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿತ್ತು.
'ಕಾಲ್ಪನಿಕ ದೈತ್ಯ ಪ್ರಾಣಿಯ ಹೆಜ್ಜೆಗುರುತುಗಳನ್ನು ನೇಪಾಳದ ಮಕಾಲು ಬೇಸ್ ಕ್ಯಾಂಪ್‌ನಲ್ಲಿ ಏಪ್ರಿಲ್ 9ರಂದು ಪತ್ತೆ ಹಚ್ಚಲಾಗಿದೆ’ ಎಂದೂ ಸೇನೆ ಹೇಳಿತ್ತು.
ಇದನ್ನೂ ಓದಿ :ಯೇತಿ’ ಹೆಜ್ಜೆಗುರುತು ಪತ್ತೆ!
ಆದರೆ ಈ ಹೆಜ್ಜೆ ಗುರುತು ಯೇತಿಯದ್ದು ಅಲ್ಲ ಎಂದು ನೇಪಾಳದ ಸೇನಾಪಡೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದು ಕಾಡು ಕರಡಿಯ ಹೆಜ್ಜೆ ಗುರುತು, ಈ ಪ್ರದೇಶಗಳಲ್ಲಿ ಈ ರೀತಿಯ ಹೆಜ್ಜೆ ಗುರುತು ಆಗಾಗ ಗೋಚರಿಸುತ್ತಿರುತ್ತದೆ ಎಂದು ಹೇಳಿದ್ದಾರೆ.
ಭಾರತೀಯ ಸೇನೆಗೆ ಹಜ್ಜೆ ಗುರುತುಗಳು ಕಾಣಿಸಿದ್ದು, ಅವರೊಂದಿಗೆ ನಮ್ಮ ಸಂಪರ್ಕಾಧಿಕಾರಿಯೂ ಇದ್ದರು.ಹೆಜ್ಜೆ ಗುರುತು ಯಾವ ಪ್ರಾಣಿಯದ್ದು ಎಂದು ಪತ್ತೆ ಹಚ್ಚಲು ನಾವು ಯತ್ನಿಸಿದ್ದೆವು.ಅಲ್ಲಿನ ಸ್ಥಳೀಯರ ಪ್ರಕಾರ ಅದು ಕಾಡು ಕರಡಿಯ ಹೆಜ್ಜೆ ಗುರುತು ಆಗಿದ್ದು, ಆ ಪ್ರದೇಶದಲ್ಲಿ ಪದೇ ಪದೇ ಕಾಣಸಿಗುತ್ತದೆ ಎಂದು ನೇಪಾಳ ಸೇನಾಪಡೆಯ ವಕ್ತಾರ ಬ್ರಿಗೇಡಿಯರ್ ಜನರಲ್ ಬಿಗ್ಯಾನ್ ದೇವ್ ಪಾಂಡೆ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.