ADVERTISEMENT

ಖ್ಯಾತ ಅಸ್ಸಾಮಿ ಸಂಗೀತ ಸಂಯೋಜಕ ರಾಮನ್ ನಾಪತ್ತೆ: ಸಿಎಂ ಶರ್ಮಾ ಕಳವಳ

ಪಿಟಿಐ
Published 23 ಜುಲೈ 2024, 4:21 IST
Last Updated 23 ಜುಲೈ 2024, 4:21 IST
<div class="paragraphs"><p>ರಾಮನ್</p></div>

ರಾಮನ್

   

(ಚಿತ್ರ ಕೃಪೆ– X/@BimalBorah119)

ಗುವಾಹಟಿ: ಖ್ಯಾತ ಅಸ್ಸಾಮಿ ಸಂಗೀತ ಸಂಯೋಜಕ ರಾಮನ್ ಬರುವಾ ಸೋಮವಾರ ನಾಪತ್ತೆಯಾಗಿದ್ದಾರೆ ಎಂದು ಅವರ ಕುಟುಂಬ ತಿಳಿಸಿದೆ.

ADVERTISEMENT

ರಾಮನ್ ಅವರು ಗುವಾಹಟಿಯ ಲತಾಸಿಲ್ ಪ್ರದೇಶದ ತನ್ನ ಮನೆಯಿಂದ ಬೆಳಿಗ್ಗೆ ಹತ್ತಿರದ ದೇವಸ್ಥಾನಕ್ಕೆ ಹೋಗಿದ್ದರು. ಸಂಜೆಯಾದರೂ ಮನೆಗೆ ಹಿಂದಿರುಗಿಲ್ಲ. ಬಳಿಕ ಅವರ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳವಳ ವ್ಯಕ್ತಪಡಿಸಿದ ಸಿಎಂ

ರಾಮನ್ ಹಠಾತ್ ನಾಪತ್ತೆಯಾಗಿರುವ ವಿಷಯ ತಿಳಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

'ರಾಮನ್ ಅನುಪಸ್ಥಿತಿಯು ಅವರ ಕುಟುಂಬ, ಸ್ನೇಹಿತರು ಮತ್ತು ಅಸಂಖ್ಯಾತ ಅಭಿಮಾನಿಗಳನ್ನು ಚಿಂತೆಗೀಡು ಮಾಡಿದೆ. ಅವರ ಪತ್ತೆಗೆ ತ್ವರಿತ ಕ್ರಮ ಕೈಗೊಳ್ಳುವಂತೆ ನಾನು ಗುವಾಹಟಿ ಕಮಿಷನರ್ ದಿಗಂತ ಬೋರಾ ಅವರಿಗೆ ಸೂಚಿಸಿದ್ದೇನೆ' ಎಂದು ಶರ್ಮಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ರಾಮನ್ ಅವರು ಡಾ. ಬೆಜ್ಬರುವಾ, ಬರುವಾರ್ ಸಂಗೇರ್, ಮುಕುಟ, ಲಲಿತಾ, ಕೊಕಡೆಯುಟ ಸೇರಿದಂತೆ ಹಲವಾರು ಅಸ್ಸಾಮಿ ಚಲನಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.