ಮುಂಬೈ: ದೆಹಲಿ ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ದಾಂದಲೆ ಖಂಡಿಸಿ ವಿದ್ಯಾರ್ಥಿಗಳು ನಡೆಸಿದಪ್ರತಿಭಟನೆಯಲ್ಲಿ ನಟಿ ದೀಪಿಕಾ ಪಡುಕೋಣೆ ಪಾಲ್ಗೊಂಡಿದ್ದರಲ್ಲಿತಪ್ಪೇನಿಲ್ಲ ಎಂದು ಮಹಾರಾಷ್ಟ್ರದ ಸಚಿವ ಅಶೋಕ್ ಚವಾಣ್ ಹೇಳಿದ್ದಾರೆ.
ಜೆಎನ್‌ಯುನಲ್ಲಿ ನಡೆದಿರುವ ಘಟನೆಯನ್ನು ಯಾರು ಬೇಕಾದರೂ ವಿರೋಧಿಸಬಹುದು. ಜೆಎನ್‌ಯು ಪ್ರತಿಭಟನೆಗೆ ದೀಪಿಕಾ ಬೆಂಬಲ ನೀಡಿರುವುದು ತಪ್ಪು ಎಂದು ನನಗನಿಸುತ್ತಿಲ್ಲ ಎಂದಿದ್ದಾರೆ ಚವಾಣ್.
ಜೆಎನ್‌ಯು ಕ್ಯಾಂಪಸ್‌ಗೆ ಮಂಗಳವಾರ ಸಂಜೆ 7.30ರ ಸುಮಾರಿಗೆ ಭೇಟಿ ನೀಡಿದ ದೀಪಿಕಾ,ಸುಮಾರು 15 ನಿಮಿಷ ಅಲ್ಲಿದ್ದುಕೆಲವು ವಿದ್ಯಾರ್ಥಿಗಳೊಂದಿಗೆಮಾತನಾಡಿ ಅಲ್ಲಿಂದ ತೆರಳಿದ್ದರು.
ದೀಪಿಕಾ ಪಡುಕೋಣೆ ಜೆಎನ್‌ಯುಗೆ ಭೇಟಿನೀಡಿದ್ದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.