ADVERTISEMENT

ಗಣಪತಿ ಪೂಜೆಯಂದು ಮೋದಿ ಭೇಟಿ ನೀಡಿದ್ದರಲ್ಲಿ ತಪ್ಪಿಲ್ಲ: ಚಂದ್ರಚೂಡ್

ಪಿಟಿಐ
Published 4 ನವೆಂಬರ್ 2024, 16:08 IST
Last Updated 4 ನವೆಂಬರ್ 2024, 16:08 IST
ಡಿ.ವೈ.ಚಂದ್ರಚೂಡ್
ಡಿ.ವೈ.ಚಂದ್ರಚೂಡ್   

ನವದೆಹಲಿ: ಗಣಪತಿ ಪೂಜೆಯಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸಕ್ಕೆ ಭೇಟಿ ನೀಡಿದ್ದರಲ್ಲಿ ‘ಯಾವುದೇ ತಪ್ಪಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಹೇಳಿದ್ದಾರೆ. 

‘ಪ್ರಧಾನಿ ಅವರು ಗಣಪತಿ ಪೂಜೆಗಾಗಿ ನನ್ನ ನಿವಾಸಕ್ಕೆ ಬಂದಿದ್ದರು. ವಿವಿಧ ಕಾರ್ಯಕ್ರಮಗಳಲ್ಲಿ ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವೆ ನಿರಂತರ ಭೇಟಿ ಆಗುತ್ತಿರುವುದರಿಂದ ಅವರ ಈ ಭೇಟಿಯಲ್ಲಿ ಯಾವುದೇ ತಪ್ಪಿಲ್ಲ. ನಾವು ರಾಷ್ಟ್ರಪತಿ ಭವನ, ಗಣರಾಜ್ಯೋತ್ಸವ ಸಮಾರಂಭ... ಹೀಗೆ ವಿವಿಧೆಡೆ ಪರಸ್ಪರ ಭೇಟಿಯಾಗುತ್ತೇವೆ. ಪ್ರಧಾನಿ ಮತ್ತು ಇತರ ಸಚಿವರೊಂದಿಗೆ ಮಾತುಕತೆ ನಡೆಸುತ್ತೇವೆ. ಇಂತಹ ಮಾತುಕತೆಯ ಸಂದರ್ಭದಲ್ಲಿ ನಾವು ವಿಚಾರಣೆ ನಡೆಸುತ್ತಿರುವ ಪ್ರಕರಣಗಳ ಬಗ್ಗೆ ಚರ್ಚೆಯಾಗುವುದಿಲ್ಲ. ಜೀವನ, ಸಮಾಜದಲ್ಲಿನ ಆಗುಹೋಗುಗಳ ಬಗ್ಗೆ ಮಾತ್ರ ಚರ್ಚೆಯಾಗುತ್ತದೆ’ ಎಂದು ಕಾರ್ಯಕ್ರಮವೊಂದರಲ್ಲಿ ಅವರು ತಿಳಿಸಿದ್ದಾರೆ.

‘ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವಿನ ಅಧಿಕಾರವನ್ನು ಬೇರ್ಪಡಿಸುವುದು ಎಂದರೆ ಅವೆರಡೂ ಪರಸ್ಪರ ಭೇಟಿಯಾಗಬಾರದು ಎಂದರ್ಥವಲ್ಲ’ ಎಂದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.