ADVERTISEMENT

Manipur Violence | ಬಿರೇನ್ ಸಿಂಗ್ ಸಭೆಗಳಿಗೆ ಹಾಜರಾಗದಂತೆ NPP ಶಾಸಕರಿಗೆ ಸೂಚನೆ

ಪಿಟಿಐ
Published 22 ನವೆಂಬರ್ 2024, 3:09 IST
Last Updated 22 ನವೆಂಬರ್ 2024, 3:09 IST
ಬಿರೇನ್ ಸಿಂಗ್
ಬಿರೇನ್ ಸಿಂಗ್   

ಇಂಫಾಲ್‌: ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ನೇತೃತ್ವದ ಸರ್ಕಾರ ಕರೆಯುವ ಯಾವುದೇ ಸಭೆಗಳಿಗೆ ಹಾಜರಾಗದಂತೆ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಮಣಿಪುರ ಘಟಕವು ತನ್ನ ಶಾಸಕರಿಗೆ ಸೂಚನೆ ನೀಡಿದೆ.

ಪಕ್ಷದ ಎಲ್ಲಾ ಶಾಸಕರು ಈ ನಿರ್ಧಾರವನ್ನು ಕಡ್ಡಾಯವಾಗಿ ಪಾಲಿಸಬೇಕು. ಜತೆಗೆ, ಯಾವುದೇ ಅಧಿಕೃತ ಹೇಳಿಕೆಗಳನ್ನು ನೀಡುವ ಮೊದಲು ಅಥವಾ ಈ ವಿಷಯದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಅನುಮತಿ ಪಡೆಯಬೇಕು ಎಂದು ಎನ್‌ಪಿಪಿ ರಾಜ್ಯಾಧ್ಯಕ್ಷ ಎನ್.ಕೈಸಿ ತಿಳಿಸಿದ್ದಾರೆ.

ನವೆಂಬರ್ 18ರಂದು ಸಿಎಂ ಬಿರೇನ್ ಸಿಂಗ್ ಕರೆದಿದ್ದ ಎನ್‌ಡಿಎ ಸಭೆಯಲ್ಲಿ ಮೂವರು ಎನ್‌ಪಿಪಿ ಶಾಸಕರು ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷ ಹೊಸ ನಿರ್ದೇಶನ ನೀಡಿದೆ.

ADVERTISEMENT

ಮಣಿಪುರ ವಿಧಾನಸಭೆಯಲ್ಲಿ ಏಳು ಮಂದಿ ಶಾಸಕರ ಬಲ ಹೊಂದಿರುವ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಬಿರೇನ್ ಸಿಂಗ್ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಈಚೆಗೆ ಹಿಂಪಡೆದಿತ್ತು. ಮೈತೇಯಿ ಹಾಗೂ ಕುಕಿ ಸಮುದಾಯಗಳ ನಡುವೆ ಉದ್ಭವಿಸಿರುವ ಬಿಕ್ಕಟ್ಟನ್ನು ಶಮನಗೊಳಿಸುವಲ್ಲಿ ಸರ್ಕಾರವು ಸಂಪೂರ್ಣವಾಗಿ ವಿಫಲಗೊಂಡಿದೆ ಎಂದು ಎನ್‌ಪಿಪಿ ಆರೋಪಿಸಿತ್ತು.

60 ಸದಸ್ಯ ಬಲದ ಮಣಿಪುರ ವಿಧಾನಸಭೆಯಲ್ಲಿ ಎನ್‌ಪಿಪಿ 7 ಶಾಸಕರನ್ನು ಹೊಂದಿದೆ. ಬಿಜೆಪಿ 32 ಶಾಸಕರನ್ನು ಹೊಂದಿದೆ. ಹಾಗಾಗಿ, ಸರ್ಕಾರಕ್ಕೆ ಅಸ್ಥಿರತೆ ಕಾಡುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.