ADVERTISEMENT

ರಾಜಸ್ಥಾನದಲ್ಲಿ ಎನ್‌ಆರ್‌ಸಿ, ಸಿಎಎ ಜಾರಿಗೆ ಅವಕಾಶವಿಲ್ಲ: ಅಶೋಕ್‌ ಗೆಹ್ಲೋಟ್

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2019, 11:45 IST
Last Updated 22 ಡಿಸೆಂಬರ್ 2019, 11:45 IST
   

ಜೈಪುರ:ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಗಳು(ಸಿಎಎ) ಈ ದೇಶದಲ್ಲಿ ಕಾರ್ಯಗತಗೊಳಿಸಲು ಅರ್ಹವಲ್ಲದ ಕಾನೂನುಗಳು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ತಿಳಿಸಿದ್ದಾರೆ.

ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್‌ಸಿ) ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಗಳ ವಿರುದ್ಧ ಜೈಪುರದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ’ಎನ್‌ಆರ್‌ಸಿ ಮತ್ತು ಸಿಎಎಗಳನ್ನು ರಾಜಸ್ಥಾನದಲ್ಲಿ ಜಾರಿ ಮಾಡಲಾಗುವುದಿಲ್ಲ‘ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿರುವ ಅಶೋಕ್‌ ಗೆಹ್ಲೋಟ್‌, ’9 ರಾಜ್ಯಗಳ ಮುಖ್ಯಮಂತ್ರಿಗಳು ಕಾಯ್ದೆಗಳ ಪರವಾಗಿ ಇಲ್ಲ ಎಂಬುದನ್ನು ನೀವು ಆಲಿಸಲೇಬೇಕು. ಸಂಸತ್‌ನಲ್ಲಿ ನಿಮಗೆ ಬೆಂಬಲ ಸೂಚಿಸಿದ್ದ ಬಿಹಾರ ಹಾಗೂ ಒಡಿಸ್ಸಾ ಮುಖ್ಯಮಂತ್ರಿಗಳು ತಮ್ಮ ರಾಜ್ಯದಲ್ಲಿ ಕಾಯ್ದೆಗಳನ್ನು ಜಾರಿಗೊಳಿಸುವುದಿಲ್ಲ ಎಂದಿದ್ದಾರೆ. ನೀವು ಸಾರ್ವಜನಿಕರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಈಗಿರುವ ಎನ್‌ಆರ್‌ಸಿ ಮತ್ತು ಸಿಎಎಗಳನ್ನ ಜಾರಿಗೊಳಿಸುವುದಿಲ್ಲ ಎಂಬುದಾಗಿ ಘೋಷಿಸಿ,’ ಎಂದು ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.