ADVERTISEMENT

ಎನ್‌ಎಸ್‌ಇ ಫೋನ್ ಕದ್ದಾಲಿಕೆ: ಚಿತ್ರ ರಾಮಕೃಷ್ಣಗೆ ಜಾಮೀನು ಮಂಜೂರು

ಪಿಟಿಐ
Published 9 ಫೆಬ್ರುವರಿ 2023, 6:18 IST
Last Updated 9 ಫೆಬ್ರುವರಿ 2023, 6:18 IST
ಚಿತ್ರಾ ರಾಮಕೃಷ್ಣ
ಚಿತ್ರಾ ರಾಮಕೃಷ್ಣ   

ನವದೆಹಲಿ: ರಾಷ್ಟ್ರೀಯ ಷೇರುಪೇಟೆಯ (ಎನ್‌ಎಸ್‌ಇ) ಸಿಬ್ಬಂದಿಗಳ ಫೋನ್ ಕದ್ದಾಲಿಕೆ ಆರೋಪಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಗುರುವಾರ, ಎನ್‌ಎಸ್‌ಇ ಮಾಜಿ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಚಿತ್ರಾ ರಾಮಕೃಷ್ಣ ಅವರಿಗೆ ಜಾಮೀನು ಮಂಜೂರು ಮಾಡಿದೆ.

ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಲಾಗಿದೆ ಎಂದು ಆದೇಶ ಹೊರಡಿಸಿದರು.

ಎನ್‌ಎಸ್‌ಇ ಹಗರಣದಲ್ಲಿ ಈ ಹಿಂದೆ ಸಿಬಿಐಯಿಂದ ಬಂಧನಕ್ಕೊಳಗಾಗಿದ್ದ ಚಿತ್ರಾ ಅವರನ್ನು ಈ ಪ್ರಕರಣದಲ್ಲಿ ಜಾರಿ ನಿರ್ದೇಶಾನಲಯ ಕಳೆದ ವರ್ಷ ಜುಲೈ 14ರಂದು ಬಂಧಿಸಿತ್ತು.

ಸಿಬಿಐ ಪ್ರಕರಣದಲ್ಲಿ ಆಕೆಗೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ ಷಡ್ಯಂತ್ರದ ಹಿಂದಿನ ಸೂತ್ರಧಾರಿ ಎಂಬ ಕಾರಣಕ್ಕೆ ಆಕೆಯ ಜಾಮೀನು ಅರ್ಜಿಯನ್ನು ಇ.ಡಿ ವಿರೋಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.