ನವದೆಹಲಿ: ರಾಷ್ಟ್ರೀಯ ಭದ್ರತಾ ಪಡೆಯ (ಎನ್‌ಎಸ್‌ಜಿ) ಭಯೋತ್ಪಾದಕ ನಿಗ್ರಹ ದಳದ ಕಮಾಂಡೋಗಳು ‘ರಾಷ್ಟ್ರೀಯ ಅಣಕು ಅಭ್ಯಾಸ‘ದ ಭಾಗವಾಗಿ ರಾಷ್ಟ್ರರಾಜಧಾನಿ ಹಾಗೂ ಮೂರು ರಾಜ್ಯಗಳಲ್ಲಿ ಮಂಗಳವಾರ ಅಣಕು ಭಯೋತ್ಪಾದನಾ ನಿಗ್ರಹದ ಅಭ್ಯಾಸ ನಡೆಸಿದರು.
ನವದೆಹಲಿಯಲ್ಲದೆ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್‌ನ ಕೆಲವು ನಗರಗಳಲ್ಲಿ ಎನ್‌ಎಸ್‌ಜಿ ಕಮಾಂಡೊಗಳು ಅಣಕು ಪ್ರದರ್ಶನ ನಡೆಸಿದರು. ಉಗ್ರರು ವ್ಯಕ್ತಿಗಳನ್ನು ಅಪಹರಿಸಿ, ಒತ್ತೆಯಾಗಿಟ್ಟುಕೊಂಡಾಗ ಎನ್‌ಎಸ್‌ಜಿ ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಅಣಕು ಪ್ರದರ್ಶನಗಳ ಮೂಲಕ ಪ್ರಸ್ತುತಪಡಿಸಲಾಯಿತು.
‘ಪ್ರತಿ ವರ್ಷ ‘ಗಾಂಢೀವ್‘ ಹೆಸರಿನಲ್ಲಿ ಒಂದು ವಾರದ ಕಾಲ ನಡೆಯಲಿರುವ ಈ ವಾರ್ಷಿಕ ಅಭ್ಯಾಸದ ಮೂರನೇ ಆವೃತ್ತಿ ದೇಶದ ಮೂರು ರಾಜ್ಯಗಳಲ್ಲಿ ಆಗಸ್ಟ್ 22 ರಿಂದ ಆರಂಭವಾಗಿದ್ದು, ಆ. 28ರವರೆಗೂ ಮುಂದುವರಿಯುತ್ತದೆ‘ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.