ಭೋಪಾಲ್: ಹುಲಿಗಳ ಸಂಖ್ಯೆ ಹೆಚ್ಚಾಗಿರುವ ಮಧ್ಯಪ್ರದೇಶದಿಂದ ಕೆಲ ಹುಲಿಗಳನ್ನು ಒಡಿಶಾ, ಛತ್ತೀಸಗಡ ಮತ್ತು ರಾಜಸ್ಥಾನಕ್ಕೆ ಸ್ಥಳಾಂತರಿಸಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಒಪ್ಪಿಗೆ ಸೂಚಿಸಿದೆ ಎಂದು ಮಧ್ಯಪ್ರದೇಶ ಅರಣ್ಯ ಇಲಾಖೆ ತಿಳಿಸಿದೆ.
ಸೂಚಿತ ಮೂರೂ ರಾಜ್ಯಗಳಲ್ಲಿಯೂ ಹುಲಿಗಳ ಸಂತತಿ ಹರಡಲು ಈ ಯೋಜನೆ ಸಹಾಯವಾಗಲಿದೆ ಎಂದು ವನ್ಯಜೀವಿ ತಜ್ಞರು ಹೇಳಿದ್ದಾರೆ.
ಹುಲಿಗಳನ್ನು ಸ್ಥಳಾಂತರಿಸಲು NTCA ತಾಂತ್ರಿಕ ಸಮಿತಿ ಒಪ್ಪಿಗೆ ಸೂಚಿಸಿದೆ ಎಂದು ಮಧ್ಯಪ್ರದೇಶ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬರಾಜನ್ ಸೇನ್ ತಿಳಿಸಿದ್ದಾರೆ.
ಮೂರೂ ರಾಜ್ಯಗಳಿಗೂ ತಲಾ ಮೂರು ಗಂಡು ಹುಲಿ ಹಾಗೂ ತಲಾ ಒಂದು ಹೆಣ್ಣು ಹುಲಿಯನ್ನು ಕಳುಹಿಸಿಕೊಡಲಾಗುವುದು. ಆಯ್ಕೆ ಮಾಡಿದ ಸಂರಕ್ಷಿತಾರಣ್ಯದಲ್ಲಿ ಹುಲಿಗಳಿಗೆ ಅತಿಹೆಚ್ಚಿನ ಕಾಳಜಿಯನ್ನು ಆಯಾ ರಾಜ್ಯಗಳು ತೆಗೆದುಕೊಳ್ಳುವ ಭರವಸೆ ಇದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಸರ್ಕಾರಿ ಅಂಕಿ ಅಂಶಗಳ ಪ್ರಕಾರ ಮಧ್ಯಪ್ರದೇಶದಲ್ಲಿ 785 ಹುಲಿಗಳಿವೆ. ಇದು ಭಾರತದಲ್ಲೇ ಅತಿ ಹೆಚ್ಚು. ನಂತರದ ಸ್ಥಾನದಲ್ಲಿ ಕರ್ನಾಟಕ (400ಕ್ಕೂ ಹೆಚ್ಚು) ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.