ADVERTISEMENT

ಜಲಾಂತರ್ಗಾಮಿ ‘ಐಎನ್‌ಎಸ್‌ ಅರಿಹಂತ’ದಿಂದ ಕ್ಷಿಪಣಿಯ ಯಶಸ್ವಿ ಉಡಾವಣೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2022, 16:16 IST
Last Updated 14 ಅಕ್ಟೋಬರ್ 2022, 16:16 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಜಲಾಂತರ್ಗಾಮಿ ‘ಐಎನ್‌ಎಸ್‌ ಅರಿಹಂತ’ದಿಂದಬ್ಯಾಲಿಸ್ಟಿಕ್‌ ಕ್ಷಿಪಣಿಗಳನ್ನು (ಎಸ್‌ಎಲ್‌ಬಿಎಂ) ಬಂಗಾಳ ಕೊಲ್ಲಿಯಲ್ಲಿ ಶುಕ್ರವಾರ ಯಶಸ್ವಿಯಾಗಿ ಉಡಾಯಿಸಲಾಯಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

‘ಬಂಗಾಳ ಕೊಲ್ಲಿಯಲ್ಲಿ ಪೂರ್ವನಿರ್ಧರಿತ ಗುರಿಯನ್ನು ಈ ಕ್ಷಿಪಣಿಯು ಬಹಳ ನಿಖರವಾಗಿ ತಲುಪಿತು. ಈ ಕ್ಷಿಪಣಿ ವ್ಯವಸ್ಥೆಯ ಕಾರ್ಯಾಚರಣೆ ಹಾಗೂ ತಾಂತ್ರಿಕ ಪರಿಮಾಣಗಳನ್ನು ಈ ಪರೀಕ್ಷೆ ಸಾಬೀತುಪಡಿಸಿತು. ಇದು ಭಾರತದ ಪಡೆಗಳ ದಾಳಿ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿದೆ’ ಎಂದು ಸಚಿವಾಲಯ ಹೇಳಿದೆ.

ಈ ಕ್ಷಿಪಣಿ ವ್ಯವಸ್ಥೆಯನ್ನು ‘ಜಲಾಂತರ್ಗಾಮಿಯಿಂದ ಉಡಾಯಿಸಿದ ಬ್ಯಾಲಿಸ್ಟಿಕ್‌ ಕ್ಷಿಪಣಿ’ (ಎಸ್‌ಎಲ್‌ಬಿಎಂ) ಎನ್ನಲಾಗುತ್ತದೆ. ಅಣ್ವಸ್ತ್ರ ದಾಳಿಗೆ ಪ್ರತಿರೋಧ ಒಡ್ಡುವ ಸಾಮರ್ಥ್ಯವನ್ನು ಈ ಕ್ಷಿಪಣಿ ವ್ಯವಸ್ಥೆ ಹೊಂದಿದೆ. ಇದು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಮೊದಲ ಇಂಥ ಕ್ಷಿಪಣಿ ವ್ಯವಸ್ಥೆಯೂ ಆಗಿದೆ.

ADVERTISEMENT

‘ಐಎನ್‌ಎಸ್‌ ಅರಿಹಂತ’ ಜಲಾಂತರ್ಗಾಮಿಯು 750 ಕಿ.ಮೀ. (ಕೆ–15) ಹಾಗೂ 3,500 ಕಿ.ಮೀ. (ಕೆ–4) ದೂರಕ್ಕೆ ಚಿಮ್ಮಬಲ್ಲ ಕ್ಷಿಪಣಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.